ಯಂಗ್ ಫ್ರೆಂಡ್ಸ್ ಜೊತೆ ಮೋದಿ ‘ಕಾನ್ ಕಿ ಬಾತ್’: ನೀವು ನೋಡಲೇಬೇಕಾದ ಫೋಟೋ!

Published : Sep 21, 2018, 06:40 PM IST
ಯಂಗ್ ಫ್ರೆಂಡ್ಸ್ ಜೊತೆ ಮೋದಿ ‘ಕಾನ್ ಕಿ ಬಾತ್’: ನೀವು ನೋಡಲೇಬೇಕಾದ ಫೋಟೋ!

ಸಾರಾಂಶ

‘ನನ್ನ ಯುವ ಮಿತ್ರರು ಮತ್ತು ನಾನು’! ಪ್ರಧಾನಿ ಮೋದಿ ಅವರ ಯುವ ಮಿತ್ರರನ್ನು ಕಂಡಿರಾ?! ಮಕ್ಕಳೊಂದಿಗೆ ‘ಕಾನ್ ಕಿ ಬಾತ್’ ಮಾಡುವ ಮೋದಿ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮೋದಿ ಫೋಟೋ! ಮೋದಿ ಫೋಟೋಗೆ ಲಘು ಹಾಸ್ಯ ಮಾಡಿದ ನೆಟಿಜನ್ಸ್

ನವದೆಹಲಿ(ಸೆ.21): ಪ್ರಧಾನಿ ನರೇಂದ್ರ ಮೋದಿ ಕಳೆದ ಸೆ.17 ರಂದು ತಮ್ಮ 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸ್ವಕ್ಷೇತ್ರ ವಾರಣಾಸಿಯಲ್ಲಿ ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಟ ಮೋದಿ, ಮಕ್ಕಳ ಜೊತೆಗಿನ ಮಧುರ ಕ್ಷಣಗಳನ್ನು ತಮ್ಮ ಇನ್ಸಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದಂದು ವಾರಣಾಸಿಯಲ್ಲಿದ್ದ ಪ್ರಧಾನಿ ಮೋದಿ, ಶಾಲಾ ಮಕ್ಕಳೊಂದಿಗೆ ನಕ್ಕು ನಲಿದರು. ಈ ವೇಳೆ ಶಾಲಾ ಬಾಲಕನೋರ್ವನ ಕಿವಿ ಹಿಂಡುತ್ತಿರುವ ಮೋದಿ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಮೋದಿ ಈ ಫೋಟೋಗೆ ‘ನನ್ನ ಯುವ ಮಿತ್ರರು ಮತ್ತು ನಾನು’ ಎಂಬ ಶಿರ್ಷಿಕೆ ಕೂಡ ನೀಡಿದ್ದಾರೆ.

ಇನ್ನು ಪ್ರಧಾನಿ ಮೋದಿ ಮಕ್ಕಳನ್ನು ಎದುರುಗೊಂಡಾಗ ಅವರ ಕಿವಿ ಹಿಂಡುವುದು ಸಾಮಾನ್ಯವಾಗಿದ್ದು. ಮೋದಿ ಮಕ್ಕಳೊಂದಿಗೆ ಯಾವಾಗಲೂ ‘ಕಾನ್ ಕಿ ಬಾತ್’ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಲಘು ಹಾಸ್ಯ ಮಾಡಿದ್ದಾರೆ.

ಇದಕ್ಕೆ ಉದಾಹರಣೆ ಎಂಬಂತೆ ಕೆನಡಾ ಪ್ರಧಾನಿ ಜಸ್ಟೀನ್ ಟ್ರಾಡೋ ಭಾರತಕ್ಕೆ ಬಂದಾಗ, ಅವರ ಮಗಳ ಕಿವಿ ಹಿಂಡಿದ ಫೋಟೋವನ್ನು ಕೆಲವರು ಶೇರ್ ಮಾಡಿದ್ದಾರೆ.

ಅದರಂತೆ ನೌಕಾಸೇನೆಯ ಸಮಾರಂಭವೊಂದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಗ ಆರವ್ ಅವರ ಕಿವಿ ಹಿಂಡಿದ ಫೋಟೋ ಕೂಡ ಮತ್ತೆ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಟಲ್ ಅರೆಸ್ಟ್‌ಗೆ ಹೆದರಿ ಕೋಟಿಗಟ್ಟಲೆ ಬೆಲೆಬಾಳುವ ಸೈಟ್, ಮನೆ ಮಠ ಮಾರಿದ ಬೆಂಗಳೂರು ಮಹಿಳಾ ಟೆಕ್ಕಿ!
ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!