ಆಸ್ತಿ ಕೇಳಿದರೆ ಮಂಚಕ್ಕೆ ಬಾ ಅಂಥಾನೆ ಈ ಮೈದುನ!

Published : Jun 29, 2018, 08:04 PM ISTUpdated : Jun 29, 2018, 08:06 PM IST
ಆಸ್ತಿ ಕೇಳಿದರೆ ಮಂಚಕ್ಕೆ ಬಾ ಅಂಥಾನೆ ಈ ಮೈದುನ!

ಸಾರಾಂಶ

ನ್ಯಾಯ ಕೊಡಿಸುವಂತೆ ಮಹಿಳೆಯೊಬ್ಬರು ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಾಗಿಲು ಬಡಿದಿದ್ದಾರೆ. ಮದುವೆಯಾಗಿರುವ ಮೈದುನನೇ ಅತ್ತಿಗೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುವುದಕ್ಕೆ ಮುಂದಾಗಿರುವ ದುರಂತ ಕತೆ ಇದು.

    ಶಿವಮೊಗ್ಗ[ಜೂ.29] ಆಕೆ ಬದುಕಿನಲ್ಲಿ ಕರಾಳ ಅಧ್ಯಾಯವೊಂದು ಮುಗಿದು ಹೋಗಿತ್ತು. ಗಂಡ ಸತ್ತು ಹೋಗಿದ್ದು ಬದುಕಿನಲ್ಲಿ ನ್ಯಾಯಕ್ಕಾಗಿ ಇನ್ನು ಹೋರಾಟ ಮಾಡುತ್ತಿದ್ದಾಳೆ.  ಎರಡು ಪುಟಾಣಿ ಮಕ್ಕಳು ಸಹ ದಾಂಪತ್ಯದ ಬಳುವಳಿಯಾಗಿ ಆಕೆಯ ಜತೆಗಿವೆ. ಅವಳ ಹೋರಾಟ ಇದೀಗ ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೂ ಬಂದು ತಲುಪಿದೆ.

    ಪತಿ ಮರಣದ ನಂತರ ಮೈದುನ ಸೇರಬೇಕಾದ ಆಸ್ತಿಯನ್ನು ಕೊಡದೆ ಲೈಂಗಿಕ ಶೋಷಣೆ ನೀಡುತ್ತಿದ್ದಾನೆ ಎಂದು ಆರೋಪಿಸಿ ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮದ ಸಂತ್ರಸ್ತೆಯೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ. ಮೈದುನ ಗಿರೀಶ ಮತ್ತು ಮಾವ ಕೃಷ್ಣಪ್ಪ ನನ್ನನ್ನು  ಮನೆಯಿಂದ ಹೊರ ಹಾಕಿಯಾಗಿದೆ. ನನ್ನೊಂದಿಗೆ ಸಹಕರಿಸಿದರೆ ಮಾತ್ರ ಆಸ್ತಿಯಲ್ಲಿ ಗಂಡನ ಪಾಲು ನೀಡುತ್ತೇನೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಮೈದುನ ಗಿರೀಶ ನನ್ನನ್ನು ಹಲವಾರು ಸಾರಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ಆರೋಪಿಸಿದ್ದಾಳೆ. ಕುಟುಂಬಕ್ಕೆ ಸೇರಿದ 5 ಎಕರೆ ಜಮೀನು ಮತ್ತು ಎರಡು ಮನೆಗಳಲ್ಲಿ ತನ್ನ ಗಂಡನ ಪಾಲನ್ನು ಕೊಡಿಸಬೇಕು ಎಂದು ಪೊಲೀಸರಿಗೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.

    PREV

    ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

    click me!

    Recommended Stories

    ಚಾಮರಾಜನಗರ: ಕೂಲಿ ಕೆಲಸ ಮುಗಿಸಿ ವಾಪಾಸ್ ಹೋಗುವ ವೇಳೆ ಕಾಡಾನೆ ದಾಳಿ; ವ್ಯಕ್ತಿ ದುರ್ಮರಣ
    ಮಲ್ಲಿಕಾರ್ಜುನ ಖರ್ಗೆಗೆ 'ಭಾರತ ರತ್ನ' ನೀಡುವಂತೆ ಕಾಂಗ್ರೆಸ್ ಮುಖಂಡ ಆಗ್ರಹ