
ಬೆಂಗಳೂರು[ಜೂ.29]: ಕಾಂಗ್ರೆಸ್ ಪ್ರಣಾಳಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಲು ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂದೇಟು ಹಾಕಿರುವ ಕಾರಣ ಕೈನ ಪ್ರಮುಖ ನಾಯಕರು ಸಿಟ್ಟಾಗಿದ್ದಾರೆ.
ಆರ್ಥಿಕ ಸಂಪನ್ಮೂಲ ಕಾರಣವೊಡ್ಡಿ ಹೆಚ್ಡಿಕೆ ಕೈ ಕಾರ್ಯಕ್ರಮಗಳಿಗೆ ತಡೆಯೊಡ್ಡಿದ್ದಾರೆ. ಸಿಎಂ ಅವರ ಕಡೆಯಿಂದ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಹಠಕ್ಕೆ ಬಿದ್ದಿದ್ದಾರೆ.
ಕುಮಾರಸ್ವಾಮಿ ನಿರ್ಧಾರ ಬೇಸರಗೊಂಡಿರುವ ವೇಣುಗೋಪಾಲ ಸಹಿತ ಪ್ರಮುಖ ನಾಯಕರು ಮತಗಳಿಕೆಯ ಕಾರ್ಯಕ್ರಮಗಳ ಪಟ್ಟಿ ಮಾಡಲು ಮುಂದಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕೆಲವೇ ಕ್ಷಣಗಳಲ್ಲಿ ಸಭೆ ಆರಂಭವಾಗಲಿದ್ದು ಜಾರಿಗೊಳಿಸಲೇ ಬೇಕಾದ ಭಾಗ್ಯ ಯೋಜನೆಗಳ ಪಟ್ಟಿ ಇಂದಿನ ಸಭೆಯಲ್ಲಿ ಸಿದ್ಧಗೊಳಿಸಲಿದ್ದಾರೆ. ಸಭೆಯಲ್ಲಿ ತಯಾರುಗೊಂಡ ಪಟ್ಟಿಯನ್ನು ಸಿಎಂಗೆ ಕಳುಹಿಸುವ ತೀರ್ಮಾನವನ್ನು ಮುಖಂಡರು ಮಾಡಲಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.