
ವಾಷಿಂಗ್ಟನ್: ಅಮೆರಿಕದಲ್ಲಿ ಬುಧವಾರ ಪ್ರಕಟವಾದ ಮೆಗಾ ಮಿಲಿಯನ್ಸ್ ಲಾಟರಿ ಜಾಕ್‌ಪಾಟ್‌ನಲ್ಲಿ ಅದೃಷ್ಟಶಾಲಿಯೊಬ್ಬರು ಭರ್ಜರಿ 11370 ಕೋಟಿ ರು.ಮೌಲ್ಯದ ಲಾಟರಿ ಗೆದ್ದಿದ್ದಾರೆ. ಇದು ಅಮೆರಿಕದ ಇತಿಹಾಸದಲ್ಲಿಯೇ ಎರಡನೇ ಅತಿದೊಡ್ಡ ಬಹುಮಾನದ ಮೊತ್ತವಾಗಿದೆ.
ದಕ್ಷಿಣ ಕೆರೋಲಿಯಾನದಲ್ಲಿ ಟಿಕೆಟ್ ಖರೀದಿಸಿದ್ದ ವ್ಯಕ್ತಿಗೆ ಬಂಪರ್ ಬಹುಮಾನ ಬಂದಿದೆ ಎಂದು ಆಯೋಜಕರು ಪ್ರಕಟಿಸಿದ್ದಾರೆ.
ಅದರೆ ಸುರಕ್ಷತೆಯ ದೃಷ್ಟಿಯಿಂದ ಅದೃಷ್ಟಶಾಲಿಯ ಹೆಸರು ಬಹಿರಂಗಪಡಿಸಲಾಗಿಲ್ಲ. ನಿಯಮಗಳ ಪ್ರಕಾರ ಬಂಪರ್ ಲಾಟರಿ ಗೆದ್ದ ವ್ಯಕ್ತಿ, ತಕ್ಷಣವೇ ಹಣ ಪಡೆಯುವುದಾದರೆ ಆತನಿಗೆ ಅಂದಾಜು 6750 ಕೋಟಿ ರು. ನಗದು ನೀಡಲಾಗುವುದು. ಒಂದು ವೇಳೆ ಪೂರ್ತಿ ಹಣ ಬೇಕೆಂದಾದಲ್ಲಿ ಆತ 26 ವರ್ಷ ಕಾಯಬೇಕು.
ಇಷ್ಟು ಅವಧಿಯಲ್ಲಿ ಆತನಿಗೆ ಹಂತಹಂತವಾಗಿ ಹಣವನ್ನು ನೀಡಲಾಗುವುದು. ಇದೇ ವೇಳೆ 2 ನೇ ಬಹುಮಾನವಾಗಿ 36 ಜನರಿಗೆ ತಲಾ 7.4 ಕೋಟಿ ರು. ನೀಡಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.