18 ಶಾಸಕರ ಅನರ್ಹತೆ: ಸ್ಪೀಕರ್ ತೀರ್ಪು ಸರಿ ಎಂದ ಹೈಕೋರ್ಟ್!

By Web DeskFirst Published Oct 25, 2018, 12:07 PM IST
Highlights

ಎಐಎಡಿಎಂಕೆಯ 18 ಬಂಡಾಯ ಶಾಸಕರ ಅನರ್ಹತೆ ಎತ್ತಿ ಹಿಡಿದ ಹೈಕೋರ್ಟ್! 18 ಬಂಡಾಯ ಶಾಸಕರ ಅನರ್ಹತೆ ಮಾಡಿ ಸ್ಪೀಕರ್ ನೀಡಿದ್ದ ತೀರ್ಮಾನ ಸರಿ ಎಂದ ಹೈಕೋರ್ಟ್! ಪಳನಿಸ್ವಾಮಿ ವಿರುದ್ಧ ಅವಿಶ್ವಾಸ ನಿರ್ಣಯ ಪತ್ರ ರಾಜ್ಯಪಾಲರಿಗೆ ಸಲ್ಲಿಸಿದ್ದ 18 ಬಂಡಾಯ ಶಾಸಕರು! 18 ಜನರ ಶಾಸಕತ್ವ ರದ್ದಾಗಲಿದ್ದು ಮತ್ತೆ ಈ ಕ್ಷೇತ್ರದಲ್ಲಿ ಉಪಚುನಾವಣೆ

ಚೆನ್ನೈ(ಅ.25): ಎಐಎಡಿಎಂಕೆಯ 18 ಬಂಡಾಯ ಶಾಸಕರ ಅನರ್ಹಗೊಳಿಸಿರುವ ಸ್ಪೀಕರ್ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ.

ಅಣ್ಣಾ ಡಿಎಂಕೆಯ 18 ಬಂಡಾಯ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ನೀಡಿದ್ದ ತೀರ್ಮಾನವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ತೀರ್ಪು ನೀಡಿದ್ದರೆ, ಮೂಲ ನ್ಯಾಯಪೀಠದಲ್ಲಿ ಎರಡನೇ ನ್ಯಾಯಾಧೀಶರು ಅದಕ್ಕೆ ವಿರುದ್ಧ ತೀರ್ಪು ನೀಡಿದ್ದರು.

ಎಐಎಡಿಎಂಕೆಯ ಮಾಜಿ ಬಂಡಾಯ ನಾಯಕ ಟಿಟಿವಿ ದಿನಕರನ್‌ಗೆ ನಿಷ್ಠೆ ತೋರಿಸಿ, ಮುಖ್ಯಮಂತ್ರಿ ಪಳನಿಸ್ವಾಮಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಪತ್ರವನ್ನು ಆಗಿನ ರಾಜ್ಯಪಾಲ ಸಿಎಚ್ ವಿದ್ಯಾಸಾಗರ್ ರಾವ್ ಅವರಿಗೆ ಸಲ್ಲಿಸಿದ್ದಕ್ಕೆ 18 ಶಾಸಕರನ್ನು ಸ್ಪೀಕರ್ ಶಾಸಕತ್ವದಿಂದ ಅನರ್ಹಗೊಳಿಸಿದ್ದರು.

ಇದೀಗ ಹೈಕೋರ್ಟ್ ಶಾಸಕರ ಅನರ್ಹತೆಯನ್ನು ಎತ್ತಿಹಿಡಿದಿರುವುದರಿಂದ 18 ಮಂದಿಯ ಶಾಸಕತ್ವ ರದ್ದಾಗಲಿದ್ದು ಅವರ ಕ್ಷೇತ್ರಗಳು ಖಾಲಿಯಾಗುತ್ತವೆ ಮತ್ತು ಅಲ್ಲಿ ಉಪ ಚುನಾವಣೆ ನಡೆಸಬೇಕಾಗುತ್ತದೆ.

This is a victory for dharma & a slap in the face of traitors & cheaters. Even if an appeal is filed, we are sure that truth only will win: Tamil Nadu Deputy Speaker Pollachi V Jayaraman on disqualification of 18 AIADMK MLAs upheld by Madras High Court pic.twitter.com/D3ifZceloQ

— ANI (@ANI)

ನ್ಯಾಯಮೂರ್ತಿ ಎಂ ಸತ್ಯನಾರಾಯಣ ಇಂದು ತೀರ್ಪು ಪ್ರಕಟಿಸಿದ್ದಾರೆ. ಜೂನ್ 14ರಂದು ಹೈಕೋರ್ಟ್ ನ ನ್ಯಾಯಪೀಠ ವ್ಯತಿರಿಕ್ತ ತೀರ್ಪು ನೀಡಿದ ನಂತರ ಸುಪ್ರೀಂ ಕೋರ್ಟ್ ನಿಂದ ನೇಮಕಗೊಂಡಿರುವ ಮೂರನೇ ನ್ಯಾಯಾಧೀಶರು ನೀಡುತ್ತಿರುವ ತೀರ್ಪು ಇದಾಗಿದೆ.

click me!