2020ರ ಬಳಿಕ ಈ ವಾಹನಗಳಿಗೆ ನಿಷೇಧ

By Web DeskFirst Published Oct 25, 2018, 12:07 PM IST
Highlights

2020 ಬಳಿಕ ಇಂತಹ ವಾಹನಗಳಿಗೆ ನಿಷೇಧ ಹೇರಲಾಗುತ್ತಿದೆ. ಆಟೋಮೊಬೈಲ್ ಕಂಪನಿಗಳು ‘ಭಾರತ್ ಸ್ಟೇಜ್ 4’ ಮಾಲಿನ್ಯ ಗುಣಮಟ್ಟದ ವಾಹನಗಳನ್ನುಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ನವದೆಹಲಿ: 2020 ರ ಏ.1 ರಿಂದ ಆಟೋಮೊಬೈಲ್ ಕಂಪನಿಗಳು ‘ಭಾರತ್ ಸ್ಟೇಜ್ 4’ ಮಾಲಿನ್ಯ ಗುಣಮಟ್ಟದ ವಾಹನಗಳನ್ನುಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಾಹನಗಳು ಹೊರಸೂಸುವ
ಮಲಿನಕಾರಿ ಅನಿಲಗಳನ್ನು ನಿಯಂತ್ರಿಸಲು ‘ಯುರೋ ಸ್ಟೇಜ್’ ರೀತಿ  ವಿವಿಧ ಗುಣಮಟ್ಟಗಳನ್ನು ಕೇಂದ್ರ  ಸರ್ಕಾರ ನಿಗದಿಪಡಿಸಿದೆ. ಅದರಲ್ಲಿ ‘ಭಾರತ್ ಸ್ಟೇಜ್ 4’ ಕೂಡ ಒಂದು.

2017 ರ ಏ.1 ರಿಂದ ‘ಭಾರತ್ ಸ್ಟೇಜ್ 4 ’ ವ್ಯವಸ್ಥೆ ದೇಶದಲ್ಲಿ ಜಾರಿಗೆ ಬಂದಿತ್ತು. ಮುಂದಿನ ಸ್ತರವಾದ ‘ಭಾರತ್ ಸ್ಟೇಜ್ 5’ ಬದಲಿಗೆ 2020 ರ ಏ.1 ರಿಂದ ನೇರವಾಗಿ ‘ಭಾರತ್ ಸ್ಟೇಜ್ 6’ ವ್ಯವಸ್ಥೆಯನ್ನು ಅನುಷ್ಠಾನಗೊಳಿಸ ಲಾಗುತ್ತದೆ,  ಹೀಗಾಗಿ ಕಂಪನಿಗಳು ಅಂತಹ ವಾಹನಗಳನ್ನೇ ತಯಾರಿ ಸಬೇಕು ಎಂದು ಕೇಂದ್ರ ಸರ್ಕಾರ 2016 ರಲ್ಲೇ ನಿರ್ದೇಶನ ನೀಡಿತ್ತು.

ಆದರೆ ‘ಭಾರತ್ ಸ್ಟೇಜ್ 4’ರ ಗುಣಮಟ್ಟದ ವಾಹನಗಳ ಮಾರಾಟಕ್ಕೆ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಕಂಪನಿಗಳು ಕೇಳಿದ್ದವು. ಈ ವಿಷ ಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಮೂರರಿಂದ ಆರು ತಿಂಗಳ ಕಾಲಾವಕಾಶ ನೀಡಬ ಹುದು ಎಂದು ಸರ್ಕಾರ ವಾದಿಸಿತ್ತು. ಆದರೆ, ಯಾವುದೇ ಕಾಲಾವಕಾಶ ನೀಡುವುದಿಲ್ಲ ಎಂದು ಹೇಳಿರುವ ನ್ಯಾಯಪೀಠ, 2020 ರ ಏ.1 ರಿಂದ ‘ಭಾರತ್ ಸ್ಟೇಜ್ 4’ ವಾಹನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ತಾಕೀತು ಮಾಡಿದೆ.

click me!