
ನವದೆಹಲಿ (ಅ.02): ಏರ್ಪೋರ್ಟ್ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸುವ ಮೂಲಕ, ಬಾಲಿವುಡ್ ಗಾಯಕ ಆದಿತ್ಯ ನಾರಾಯಣ್ ಹೊಸ ವಿವಾದಲ್ಲಿ ಸಿಲುಕಿಕೊಂಡಿದ್ದಾರೆ.
ಖ್ಯಾತ ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್, ನಿನ್ನೆ ಒಂದು ಕಾರ್ಯಕ್ರಮಕ್ಕಾಗಿ ರಾಯ್ಪುರ್ಗೆ ತೆರಳಿದ್ದರು. ಈ ವೇಳೆ ರಾಯ್ಪುರ್ ವಿಮಾನ ನಿಲ್ದಾಣದಲ್ಲಿ, ‘ನಾನು ಇಷ್ಟ ಬಂದ ಹಾಗೇ ನಡೆದುಕೊಳ್ತೇನೆ, ನನ್ನನ್ನು ಕೇಳಲು ನೀವು ಯಾರು’ ಎಂದು ಏರ್ಲೈನ್ಸ್ ಸಿಬ್ಬಂದಿಯನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಇಂಡಿಗೋ ಏರ್ಲೈನ್ಸ್ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ನಾನು ಸೆಲೆಬ್ರೆಟಿ, ನಾನು ಏನು ಬೇಕಾದ್ರು ಮಾಡುತ್ತೇನೆ, ನೀನು ಹೇಗಿದ್ದರೂ ಮುಂಬೈಗೆ ಬಂದೇ ಬರ್ತೀಯಾ.. ಅಲ್ಲಿ ನಿನ್ನ ನೋಡ್ಕೋತೀನಿ.. ನಿನ್ನ ಚಡ್ಡಿ ಬಿಚ್ಚದಿದ್ರೆ ನಾನು ಆದಿತ್ಯ ನಾರಾಯಣ್ ಅಲ್ವೇ ಅಲ್ಲಾ’ ಅಂತಾ ಸ್ವೇಚ್ಚೆಯ ಮಾತನ್ನಾಡಿದ್ದಾರೆ. ಇನ್ನೂ ಆದಿತ್ಯ ನಾರಾಯಣ್ ಜಗಳದ ವಿಡಿಯೋ ಸಧ್ಯ ಎಲ್ಲೆಡೆ ವೈರಲ್ ಆಗಿದ್ದು, ತೀವ್ರ ಖಂಡನೆಗಳು ವ್ಯಕ್ತವಾಗಿವೆ. ಸಧ್ಯ ಆದಿತ್ಯ ಹಿಂದಿಯ ಝೀ ಟಿವಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 6 ನ್ನ ಹೋಸ್ಟ್ ಮಾಡ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.