
ಬೆಂಗಳೂರು(ಅ. 02): ದೇಶ ಪರ್ಯಟನೆಯಲ್ಲಿದ್ದ ನಾಗಾ ಸಾಧುಗಳು ಅನಿರೀಕ್ಷಿತವಾಗಿ ಬಿಎಸ್'ವೈ ನಿವಾಸಕ್ಕೆ ತೆರಳಿ ಅಚ್ಚರಿ ಹುಟ್ಟಿಸಿದ ಘಟನೆ ನಡೆದಿದೆ. ಇನ್ನೂ ಅಚ್ಚರಿ ಎಂದರೆ, ದೇವನಹಳ್ಳಿಯಿಂದ ಯಡಿಯೂರಪ್ಪನವರು ಬರುವವರೆಗೂ ಅವರ ಮನೆಯಲ್ಲೇ ಕಾದು ಕುಳಿತಿದ್ದರು. ಯಡಿಯೂರಪ್ಪನವರನ್ನು ಭೇಟಿಯಾಗಲೇಬೇಕೆಂದು ಗಲಾಟೆ ಮಾಡಿ ಅವರನ್ನ ಬೇಗ ಕರೆಸಿಕೊಂಡರು ನಾಗಾ ಸಾಧುಗಳು. ವಾರಾಣಸಿಯಿಂದ ಬಂದಿದ್ದ 20ಕ್ಕೂ ಹೆಚ್ಚು ಸಾಧುಗಳು ಬಿಎಸ್'ವೈ ನಿವಾಸದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಿಎಸ್'ವೈಗೆ ಆಶೀರ್ವಾದ ಮಾಡಿದ ಬಳಿಕವೇ ಹೊರಗೆ ಹೋಗಿದ್ದು.
ಮಹತ್ವದ ಸಂಗತಿ ಎಂದರೆ, ನಾಗಾ ಸಾಧುಗಳು ಕೆಲವಾರು ಭವಿಷ್ಯಗಳನ್ನು ನುಡಿದು ಬಿಎಸ್'ವೈಗೆ ಆಶೀರ್ವಚನ ನೀಡಿದರು. ಕೇಂದ್ರದಲ್ಲಿ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಮೋದಿಯವರೇ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ಕರ್ನಾಟಕದಲ್ಲಿ ಬಿಜೆಪಿ ಕಂಬ್ಯಾಕ್ ಮಾಡುತ್ತದೆ. ಯಡಿಯೂರಪ್ಪನವರೇ ಮತ್ತೊಮ್ಮೆ ಸಿಎಂ ಆಗುತ್ತಾರೆ ಎಂದು ನಾಗಾ ಸಾಧುಗಳು ಭವಿಷ್ಯ ನುಡಿದಿದ್ದಾರೆ.
ನಾಗಾ ಸಾಧುಗಳು ಸಾಮಾನ್ಯವಾಗಿ ಹಾಗೆ ವ್ಯಕ್ತಿಗಳು ಅದರಲ್ಲೂ ಸೆಲಬ್ರಿಟಿಗಳನ್ನು ಸುಮ್ಮಸುಮ್ಮನೆ ಭೇಟಿಯಾಗುವುದಿಲ್ಲ. ಬಿಎಸ್'ವೈ ನಿವಾಸಕ್ಕೆ ಅವರು ವಿನಾಕಾರಣ ಹೇಗೆ ಭೇಟಿ ಕೊಟ್ಟರೆಂಬುದೇ ಕುತೂಹಲದ ಸಂಗತಿ. ನಾಗಾಗಳ ಭವಿಷ್ಯನುಡಿ ನಿಜವಾಗುತ್ತಾ ಎಂದು ಕಾದುನೋಡಬೇಕಷ್ಟೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.