ಮತ್ತೊಬ್ಬ ಟಾಟಾ, ಅಂಬಾನಿ ಆಗ್ತಾರಾ ಪತಂಜಲಿ ರಾಮದೇವ್?

By Suvarna Web DeskFirst Published Jul 16, 2017, 10:49 AM IST
Highlights

ಪತಂಜಲಿ ಬ್ರ್ಯಾಂಡ್‌ನಡಿ ವಿವಿಧ ದಿನಬಳಕೆಯ ವಸ್ತು ಹೊರತರುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ನಿದ್ರೆಗೆಡಿಸಿರುವ ಯೋಗ ಗುರು ರಾಮದೇವ್ ಅವರು ಭವಿಷ್ಯದಲ್ಲಿ ಟಾಟಾ ಅಥವಾ ಅಂಬಾನಿಗಳ ರೀತಿ ಹೊರಹೊಮ್ಮಬಹುದು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಮುಂಬೈ(ಜು.16): ಪತಂಜಲಿ ಬ್ರ್ಯಾಂಡ್‌ನಡಿ ವಿವಿಧ ದಿನಬಳಕೆಯ ವಸ್ತು ಹೊರತರುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ನಿದ್ರೆಗೆಡಿಸಿರುವ ಯೋಗ ಗುರು ರಾಮದೇವ್ ಅವರು ಭವಿಷ್ಯದಲ್ಲಿ ಟಾಟಾ ಅಥವಾ ಅಂಬಾನಿಗಳ ರೀತಿ ಹೊರಹೊಮ್ಮಬಹುದು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಇದಕ್ಕೆ ಕಾರಣ, ಖಾಸಗಿ ಭದ್ರತಾ ಕ್ಷೇತ್ರಕ್ಕೆ ಪ್ರವೇಶಿಸುವ ರಾಮದೇವ್ ಘೋಷಣೆ. ಖಾಸಗಿ ಭದ್ರತಾ ಕ್ಷೇತ್ರ 40 ಸಾವಿರ ಕೋಟಿ ರು. ವ್ಯವಹಾರ ಹೊಂದಿದ್ದು, ದೊಡ್ಡ ಖಾಸಗಿ ಕಂಪನಿಗಳ ಆಡುಂಬೊಲವಾಗಿದೆ.  ಕೇವಲ 10 ವರ್ಷದಲ್ಲಿ ಪತಂಜಲಿ ಕಂಪನಿ ಯನ್ನು ದೈತ್ಯ ಸಂಸ್ಥೆಯಾಗಿ ಪರಿವರ್ತಿಸಿದ ರಾಮದೇವ್ ಅವರು, ಭದ್ರತಾ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಿದರೆ ಸುಮ್ಮನೆ ಕೂರುವವರಲ್ಲ. ದೂರಸಂಪರ್ಕ ಕ್ಷೇತ್ರಕ್ಕೂ ಕಾಲಿಡಬಹುದು.

ಯೋಗ ವಿಡಿಯೋ, ಆರೋಗ್ಯ ಟಿಪ್ಸ್ ಹಾಗೂ ಆಯುರ್ವೇದ ಪರಿಹಾರ ಒಳಗೊಂಡ ಮೊಬೈಲ್ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. 10 ವರ್ಷಗಳ ಹಿಂದೆ ಸಣ್ಣ ಕಂಪನಿಯಾಗಿದ್ದ ಪತಂಜಲಿ ಈಗ ದೇಶದ 10 ಪ್ರಭಾವಿ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

 

 

click me!