ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ನಿನ್ನೆ ಭ್ರಷ್ಟಾಚಾರದ ಬಾಂಬ್ ಸಿಡಿಸಿದ್ದ ಕಪಿಲ್ ಮಿಶ್ರಾ ಇಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಕೇಜ್ರಿವಾಲ್ 400 ಕೋಟಿ ಟ್ಯಾಂಕರ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಪಿಲ್ ಮಿಶ್ರಾ ಎಸಿಬಿಗೆ ನೀಡಿದ್ದಾರೆ.
ನವದೆಹಲಿ (ಮೇ.08): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ನಿನ್ನೆ ಭ್ರಷ್ಟಾಚಾರದ ಬಾಂಬ್ ಸಿಡಿಸಿದ್ದ ಕಪಿಲ್ ಮಿಶ್ರಾ ಇಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಕೇಜ್ರಿವಾಲ್ 400 ಕೋಟಿ ಟ್ಯಾಂಕರ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಪಿಲ್ ಮಿಶ್ರಾ ಎಸಿಬಿಗೆ ನೀಡಿದ್ದಾರೆ.
ಕಪಿಲ್ ಮಿಶ್ರಾ, ಕೇಜ್ರಿವಾಲ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆನ್ನುವ ಆಪ್ ಮಾಡುತ್ತಿರುವ ಆರೋಪವನ್ನು ತಳ್ಳಿ ಹಾಕುತ್ತಾ, ಧೈರ್ಯವಿದ್ದರೆ ನನ್ನನ್ನು ಪಕ್ಷದಿಂದ ಉಚ್ಚಾಟಿಸಲಿ, ನಾನು ಬಿಜೆಪಿ ಸೇರುವುದಿಲ್ಲವೆಂದು ಮಿಶ್ರಾ ಖಡಕ್ಕಾಗಿ ಹೇಳಿದ್ದಾರೆ.
ಟ್ಯಾಂಕರ್ ಹಗರಣದ ದಾಖಲೆಗಳನ್ನು ಎಸಿಬಿಗೆ ನೀಡಿದ್ದೇನೆ. ಮುಖ್ಯಮಂತ್ರಿ ಜನರ ದುಡ್ಡನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.