
ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಸಂರಕ್ಷಣೆಯತ್ತ ಅರಿವು ಹೆಚ್ಚಾಗಿದೆ. ಪ್ರವಾಸೋದ್ಯಮ ಇಲಾಖೆ ಕೂಡಾ ಸಾಕಷ್ಟು ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಕರ್ನಾಟಕ ವನ್ಯಜೀವಿ ಸಂಪತ್ತಿಗೆ ಹೆಸರುವಾಸಿ. ನಿತ್ಯಹರಿದ್ವರ್ಣ ಮರಗಳಿಂದ ಕಂಗೊಳಿಸುತ್ತಿತ್ತು ನಮ್ಮ ಬೆಟ್ಟ-ಗುಡ್ಡಗಳು. ಆದರೆ ಯಾವಾಗ ಅತಿಯಾದ ನಗರೀಕರಣ, ಗಣಿಗಾರಿಕೆ ಶುರುವಾಯಿತೋ ಅಲ್ಲಿಂದ ಕಾಡುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಅಲ್ಲಿರುವ ಅದೆಷ್ಟೋ ಜಾತಿಯ ಕೀಟಸಂಕುಲ, ಪ್ರಾಣಿಸಂಕುಲ, ಸಸ್ಯಸಂಕುಲ ಇಂದು ನಶಿಸಿ ಹೋಗಿವೆ. ಎಷ್ಟೋ ಜೀವಿಗಳನ್ನು ಚಿತ್ರಪಟದಲ್ಲಿ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಹೀಗೆ ಮುಂದುವರೆದರೆ ಇನ್ನಷ್ಟು ಜೀವಿಗಳನ್ನು ನಾವು ಕಳೆದುಕೊಳ್ಳುವ ಸಂಭವವಿದೆ. ಪ್ರಕೃತಿ ಸಮತೋಲನ ಕಳೆದುಕೊಳ್ಳಲಿದೆ. ಇದರ ಪರಿಣಾಮವನ್ನು ಅನುಭವಿಸಬೇಕು.
ನಮ್ಮ ರಾಜ್ಯ ಸಂಪದ್ಭರಿತವಾದ ಕಾಡುಗಳನ್ನು ಹೊಂದಿರುವ ರಾಜ್ಯ. 5 ರಾಷ್ಟ್ರೀಯ ಉದ್ಯಾನವನಗಳು, 23 ವನ್ಯಜೀವಿಧಾಮಗಳನ್ನು ಹೊಂದಿದೆ. ರಾಜ್ಯದ ಭೂ ವಿಸ್ತರಣದ ಶೇ. 3.5 ರಷ್ಟು ಭಾಗವನ್ನು ವನ್ಯಜೀವಿಗಳಿಗಾಗಿ ಮೀಸಲಿಡಲಾಗಿದೆ.
ಈಗ ನಾವು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಪ್ರವಾಸೋದ್ಯಮ ಇಲಾಖೆ, ಸರ್ಕಾರದ ಜನಜಾಗೃತಿ ಕಾರ್ಯಕ್ರಮಗಳಿಗೆ ಸಹಕರಿಸಿ ಇನ್ನುಷ್ಟು ಜನರಿಗೆ ತಲುಪುವಂತೆ ಮಾಡಬೇಕು. ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ ಕನ್ನಡಪ್ರಭ-ಸುವರ್ಣನ್ಯೂಸ್ ಕೈಜೋಡಿಸಿದೆ. ನಮ್ಮ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಕೂಡಾ ಉತ್ತಮ ಬೆಂಬಲ ವ್ಯಕ್ತವಾಗಿದೆ. ನೀವೂ ಕೈಜೋಡಿಸಿ, ಇನ್ನಷ್ಟು ಜನರಿಗೆ ತಲುಪುವಂತೆ ಸಹಕರಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.