
ಬೆಂಗಳೂರು(ಮಾ.21): ರುಚಿವರ್ಧಕ ಅಂಶವಾಗಿ ಬಳಕೆಯಾಗುತ್ತಿರುವ ಮೋನೋಸೋಡಿಯಂ ಗ್ಲುಟಮೈಟ್ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತಿಸಿದೆ. ವಿಧಾನ ಪರಿಷತ್'ನಲ್ಲಿ ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಸುಳಿವು ಕೊಟ್ಟಿದ್ದಾರೆ. ಅಂದರೆ ಇನ್ನು ಮುಂದೆ ರಸ್ತೆ ಬದಿಯ ಗೋಬಿ ಮಂಚೂರಿ ಮತ್ತು ಫ್ರೈಡ್ ರೈಸ್ ರುಚಿಹೀನವಾಗಿದೆ.
ವಿಧಾನಪರಿಷತ್ನಲ್ಲಿ ಇವತ್ತು ಗೋಬಿ ಮಂಚೂರಿ, ಫ್ರೈಡ್ ರೈಸ್ ಮತ್ತು ಚೈನೀಸ್ ಫುಡ್ ಬಿಸಿಬಿಸಿ ಚರ್ಚೆ ಆಯ್ತು. ಪ್ರಶ್ನೋತ್ತರ ಅವಧಿಯಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಿದ ಬಿಜೆಪಿ ಸದಸ್ಯ ರಾಮಚಂದ್ರಗೌಡ ಗೋಬಿ ಮಂಚೂರಿ, ಫ್ರೈಡ್ ರೈಸ್ ಗಳಲ್ಲಿ ಸುವಾಸನೆ, ರುಚಿವರ್ಧಕವಾಗಿ ಮೋನೋಸೋಡಿಯಂ ಗ್ಲುಟಮೇಟ್ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಮೋನೋಸೋಡಿಯಂ ಗ್ಲುಟಮೇಟ್ ಬಳಕೆ ಅಪರಾಧ ಆದ್ರೂ ಈವರೆಗೆ ಒಂದೇ ಒಂದು ಕೇಸ್ ದಾಖಲಾಗಿಲ್ಲ. ಇದು ಸರ್ಕಾರದ ವೈಫಲ್ಯ ಅಂತ ರಾಮಚಂದ್ರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ರು.
ಈ ಬಗ್ಗೆ ಇಲಾಖೆ ಅಧಿಕಾರಿಗಳಲ್ಲಿ ಯಾವುದೇ ಮಾಹಿತಿ ಇಲ್ಲ. ಇದು ಆರೋಗ್ಯ ಇಲಾಖೆ ಅಧಿಕಾರಿಗಳ ವೈಫಲ್ಯ ಅಂತ ಆರೋಗ್ಯ ಸಚಿವ ರಮೇಶ್ ಕುಮಾರ್ ಒಪ್ಪಿಕೊಂಡ್ರು. ರುಚಿವರ್ಧಕ ಮೋನೋಸೋಡಿಯಂ ಗ್ಲುಟಮೇಟ್ ಬ್ಯಾನ್ ಮಾಡಬೇಕೇ? ಬೇಡವೇ? ಎನ್ನುವುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಟೇಸ್ಟಿಂಗ್ ಪೌಂಡರ್ ಮೋನೋಸೋಡಿಯಂ ಗ್ಲುಟಮೈಟ್ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ಕೂಡ ಸರ್ಕಾರದಿಂದ ವ್ಯಕ್ಯವಾಗಿದೆ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.