
ಅಂಕಾರಾ(ನ.06): ಹತ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಸಹೋದರಿ ಬಂಧನದ ಬೆನ್ನಲ್ಲೇ, ಟರ್ಕಿ ಪಡೆಗಳು ಇದೀಗ ಬಾಗ್ದಾದಿ ಪತ್ನಿಯನ್ನು ಬಂಧಿಸಿವೆ.
ಬಾಗ್ದಾದಿ ಕೊನೆ ಕ್ಷಣಗಳು: ಪೆಂಟಗನ್ ಬಿಡುಗಡೆ ಮಾಡಿದ ವಿಡಿಯೋ ತುಣುಕುಗಳು!
ಈ ಕುರಿತು ಮಾಹಿತಿ ನೀಡಿರುವ ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್, ಉತ್ತರ ಸಿರಿಯಾದ ಪಟ್ಟಣವೊಂದರಲ್ಲಿ ಅಡಗಿದ್ದ ಬಾಗ್ದಾದಿ ಪತ್ನಿಯನ್ನು ಸೇನಾ ಪಡೆಗಳು ಬಂಧಿಸಿವೆ ಎಂದು ತಿಳಿಸಿದ್ದಾರೆ.
ಎಲ್ಲಿ ಓಡ್ತಿಯಾ?: ಟರ್ಕಿ ಪಡೆಗಳಿಗೆ ಸೆರೆಸಿಕ್ಕ ಬಾಗ್ದಾದಿ ತಂಗಿ ರಸ್ಮಿಯಾ!
ಉತ್ತರ ಸಿರಿಯಾದ ಎಜಾಜ್ ಪಟ್ಟಣದಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಬಾಗ್ದಾದಿ ಸಹೋದರಿ ರಸ್ಮಿಯಾ ಅವಾದ್‌ಳನ್ನು ಇತ್ತಿಚಿಗಷ್ಟೇ ಟರ್ಕಿ ಪಡೆಗಳು ಬಂಧಿಸಿದ್ದವು.
ಬಾಗ್ದಾದಿ ಮಾಹಿತಿ ನೀಡಿದಾತನಿಗೆ 175 ಕೋಟಿ ಬಹುಮಾನ
ಇದೀಗ ಬಾಗ್ದಾದಿ ಪತ್ನಿ ಕೂಡ ಸೆರೆಯಾಗಿದ್ದು, ಭಯೋತ್ಪಾದನೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಆಕೆಯ ಬಳಿಯಿದೆ ಎಂದು ಅಂದಾಜಿಸಲಾಗಿದೆ.
ಐಸಿಸ್ ಉಗ್ರ ಬಾಗ್ದಾದಿಗೆ ಪತ್ನಿಯಿಂದಲೇ ಉರುಳು; ಕಾರ್ಯಾಚರಣೆ ಹೀಗಿತ್ತು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.