
ಆಗ್ರಾ: ಪಾಕಿಸ್ತಾನ ಭಾರತೀಯ ಸೈನಿಕರ ಮೇಲೆ ಪುಲ್ವಾಮಾದಲ್ಲಿ ನಡೆಸಿದ ದಾಳಿಗೆ ಸಾಕ್ಷಿಯಾಗಿ ಭಾರತೀಯ ಯೋಧರ ಪಾರ್ಥಿವ ಶರೀರಗಳು ಮನೆಗೆ ಬಂದಿವೆ. ಹಾಗೆಯೇ ಏರ್‌ಸ್ಟ್ರೈಕ್‌ನಲ್ಲಿ ಉಗ್ರರು ಅಸುನೀಗಿದ್ದಕ್ಕೆ ಸೂಕ್ತ ಸಾಕ್ಷಿ ನೀಡ ಬೇಕೆಂದು ಪುಲ್ವಾಮಾ ದಾಳಿ ಹುತಾತ್ಮ ಯೋಧನ ಪತ್ನಿಯೊಬ್ಬರು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ಶಾಮ್ಲಿ ಸಿಆರ್‌ಪಿಎಫ್ ಹುತಾತ್ಮ ಯೋಧ ರಾಮ್ ವಕೀಲ್ ಪತ್ನಿ ಗೀತಾ ದೇವಿ, ಪಾಕಿಸ್ತಾನದಲ್ಲಿ ಸಂಭವಿಸಿದ ಉಗ್ರರ ಸಾವು ನೋವಿಗೆ ಸೂಕ್ತ ದಾಖಲೆ ನೀಡಬೇಕು. ಇಲ್ಲದಿದ್ದರೆ, ಭಾರತೀಯ ವಾಯು ಸೇನೆ ನಡೆಸಿದ ದಾಳಿಯ ಸುಳ್ಳಾಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪುಲ್ವಾಮಾ ದಾಳಿಯೊಂದು ಅಪಘಾತ: ಕಾಂಗ್ರೆಸ್ ಮುಖಂಡ
'300 ಉಗ್ರರು ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಏನಾದ್ರೂ ಸಾಕ್ಷಿ ಸಿಗಲೇ ಬೇಕಲ್ಲ? ಸೈನಿಕರ ಸಾವಿಗೆ ಪ್ರತಿಕಾರ ತೆಗೆದುಕೊಂಡಿದ್ದಾರೆಂದರೆ ಸಾಕ್ಷಿ ಒದಗಿಸಲೇಬೇಕೆಂದು,' ಸರಕಾರವನ್ನು ಆಗ್ರಹಿಸಿದ್ದಾರೆ. ಗೀತಾ ಅವರಿಗೆ ಮೂರು ಮಕ್ಕಳಿದ್ದು, ಅವರನ್ನು ಬೆಳೆಸುವ ಜವಾಬ್ದಾರಿ ಇದೆ.
ಶಾಮ್ಲಿಯ ಮತ್ತೊಬ್ಬ ಸಿಆರ್‌ಪಿಎಫ್ ಹುತಾತ್ಮ ಯೋಧ ಪ್ರದೀಪ್ ಕುಮಾರ್ ಪತ್ನಿ ಶರ್ಮಿಷ್ಠಾ ದೇವಿಯೂ ಏರ್‌ಸ್ಟ್ರೈಕ್ ನಡೆಸಿದ್ದಕ್ಕೆ ಸರಕಾರ ಸೂಕ್ತ ಸಾಕ್ಷಿ ನೀಡಬೇಕೆಂದು ಕಳೆದ ವಾರ ಆಗ್ರಹಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ರಜೆ ಮುಗಿಸಿ, ಕರ್ತವ್ಯಕ್ಕೆ ಮರಳುತ್ತಿದ್ದ ಸೈನಿಕರ ವಾಹನಕ್ಕೆ ಆತ್ಮಾಹುತಿ ದಾಳಿ ನಡೆಸಿ, 40 ಸೈನಿಕರನ್ನು ಪಾಕಿಸ್ತಾನ ಮೂಲದ ಜೈಷೆ ಮೊಹ್ಮದ್ ಉಗ್ರ ಸಂಘಟನೆಯ ಕಾರ್ಯಕರ್ತನೊಬ್ಬ ಬಲಿ ತೆಗೆದುಕೊಂಡಿದ್ದ.
ಪುಲ್ವಾಮಾ ದಾಳಿಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.