ಮೋದಿಗಾಗಿ 32 ವರ್ಷ ಹುಡುಕಿದ ಬ್ಯಾಂಕ್

Published : Sep 03, 2018, 11:25 AM ISTUpdated : Sep 09, 2018, 09:58 PM IST
ಮೋದಿಗಾಗಿ 32 ವರ್ಷ ಹುಡುಕಿದ ಬ್ಯಾಂಕ್

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಈ ಬ್ಯಾಂಕ್ ಅಧಿಕಾರಿಗಳು ಬರೋಬ್ಬರಿ ಸುಮಾರು 32 ವರ್ಷಗಳ ಕಾಲ ಹುಡುಕಾಡಿದ್ದರು ಎನ್ನುವ ವಿಚಾರವನ್ನು  ಇದೀಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬಹಿರಂಗಪಡಿಸಿದ್ದಾರೆ. 

ನವದೆಹಲಿ: ‘ನಾನು ಶಾಲಾ ದಿನಗಳಲ್ಲಿ ದೇನಾ ಬ್ಯಾಂಕ್‌ನಲ್ಲಿ ಪಿಗ್ಗಿ ಬ್ಯಾಂಕ್ ಖಾತೆಯೊಂದನ್ನು ಆರಂಭಿಸಿದ್ದೆ. ಆದರೆ, ಆ ಖಾತೆಯಲ್ಲಿ ಹಣವೇ  ಇರಲಿಲ್ಲ. ಅದನ್ನು ಮುಚ್ಚುವ ನಿಟ್ಟಿನಲ್ಲಿ ಬ್ಯಾಂಕಿನ ಅಧಿಕಾರಿಗಳು 32ವರ್ಷ ನನ್ನನ್ನು ಹುಡುಕಾಡಿದ್ದರು’ ಎಂಬ ಸಂಗತಿಯನ್ನು ಪ್ರಧಾನಿ ಮೋದಿ ಬಹಿರಂಗಪಡಿಸಿದ್ದಾರೆ. 

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಉದ್ಘಾಟಿಸಿ ಮಾತನಾಡಿದ ಮೋದಿ, ‘ನಾನು ವಿದ್ಯಾರ್ಥಿಯಾಗಿದ್ದಾಗ ದೇನಾ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಊರು ಬಿಟ್ಟಿದ್ದೆ. ಹೀಗಾಗಿ ಬ್ಯಾಂಕ್ ಖಾತೆ ಮುಕ್ತಾಯ ಮಾಡಿಸಲು ಅಧಿಕಾರಿಗಳು ನನ್ನನ್ನು ಹುಡುಕಾಡಿದ್ದರು. ಕೊನೆಗೆ 32 ವರ್ಷಗಳ ಬಳಿಕ ಬ್ಯಾಂಕ್ ಅಧಿಕಾರಿಗಳು ನಾನು ಇರುವ ಸ್ಥಳ ಪತ್ತೆ ಮಾಡಿದರು.

ನನ್ನ ಬಳಿ ಬಂದ ಬ್ಯಾಂಕ್ ಅಧಿಕಾರಿಗಳು ಖಾತೆಯನ್ನು ಮುಕ್ತಾಯಗೊಳಿಸಲು ಸಹಿ ಹಾಕುವಂತೆ ಕೇಳಿಕೊಂಡರು. ನಾನು ಗುಜರಾತಿನ ಶಾಸಕನಾದ ಬಳಿಕ ವೇತನ ಪಡೆಯಲು ಆರಂಭಿಸಿದೆ. ಆಗ ಹೊಸದಾದ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಯಿತು. ಅದಕ್ಕೂ ಮುನ್ನ ನಾನು ಬ್ಯಾಂಕ್ ಖಾತೆಯನ್ನೇ ನಿರ್ವಹಿಸಿರಲಿಲ್ಲ’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!
Bengaluru: ಹಾರ್ಟ್‌ ಅಟ್ಯಾಕ್‌ ಆಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿ, ಪತ್ನಿಯ ಗೋಳಾಟ ಕೇಳಿಯೂ ನೆರವಿಗೆ ಬಾರದ ಜನ!