ಎನ್‌ಡಿಎ ಅವಧಿಯಲ್ಲಿ ಎಷ್ಟುಸಾಲ ಕೊಟ್ರಿ?

By Web DeskFirst Published Sep 3, 2018, 11:06 AM IST
Highlights

ಮೋದಿ ಅವರ ಕಾಂಗ್ರೆಸ್ ವಿರುದ್ಧದ ಫೋನ್ ಇನ್ ಲೋನ್ ಹೇಳಿಕೆ ಬಗ್ಗೆ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ವಿತ್ತ ಮಂತ್ರಿ ಪಿ.ಚಿದಂಬರಂ, ‘ಮೇ, 2014ರ ನಂತರ ಎಷ್ಟುಸಾಲವನ್ನು ಬ್ಯಾಂಕ್‌ಗಳು ನೀಡಿವೆ? ಅದರಲ್ಲಿ ವಸೂಲಾಗದ ಸಾಲವೆಷ್ಟು?’ ಎಂದು ಪ್ರಶ್ನಿಸಿದ್ದಾರೆ.
 

ನವದೆಹಲಿ :  ‘ಯುಪಿಎ ಸರ್ಕಾರವು 2006ರಿಂದ 2014ರ ಅವಧಿಯಲ್ಲಿ ಬೇಕಾಬಿಟ್ಟಿಯಾಗು 34 ಲಕ್ಷ ಕೋಟಿ ರು. ಸಾಲವನ್ನು ಬ್ಯಾಂಕ್‌ಗಳ ಮೂಲಕ ‘ಬೇಕಾದವರಿಗೆ’ ಹಂಚಿತು. ಯುಪಿಎ ಪ್ರಮುಖರು ಫೋನ್‌ ಮೂಲಕ ಶಿಫಾರಸು ಮಾಡಿದವರಿಗೆಲ್ಲ ಸಾಲ ಸಿಕ್ಕಿತು. ಅದೊಂದು ಫೋನ್‌-ಎ-ಲೋನ್‌ ಹಗರಣ’ ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ಎನ್‌ಡಿಎ ಅವಧಿಯಲ್ಲಿ ಎಷ್ಟುವಸೂಲಾಗದ ಬ್ಯಾಂಕ್‌ ಸಾಲವಿದೆ ಎಂದು ಅದು ಪ್ರಶ್ನಿಸಿದೆ.

ಮೋದಿ ಅವರ ಹೇಳಿಕೆ ಬಗ್ಗೆ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ವಿತ್ತ ಮಂತ್ರಿ ಪಿ.ಚಿದಂಬರಂ, ‘ಮೇ, 2014ರ ನಂತರ ಎಷ್ಟುಸಾಲವನ್ನು ಬ್ಯಾಂಕ್‌ಗಳು ನೀಡಿವೆ? ಅದರಲ್ಲಿ ವಸೂಲಾಗದ ಸಾಲವೆಷ್ಟು?’ ಎಂದು ಪ್ರಶ್ನಿಸಿದ್ದಾರೆ.

‘ಈ ಪ್ರಶ್ನೆಯನ್ನು ಸಂಸತ್ತಿನಲ್ಲಿ ಕೂಡ ಕೇಳಲಾಗಿದೆ. ಈ ಬಗ್ಗೆ ಸರ್ಕಾರ ಉತ್ತರಿಸಿಲ್ಲ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಯುಪಿಎ ಸರ್ಕಾರದ ಅವಧಿಯ ಸಾಲ ವಸೂಲಾಗದೇ ಹೋದರೆ ಅದನ್ನೇಕೆ ವಸೂಲಿ ಮಾಡಿಲ್ಲ. ಸಾಲವನ್ನೇಕೆ ಮುಂದುವರಿಸಿದಿರಿ?’ ಎಂದೂ ಚಿದಂಬರಂ ಪ್ರಶ್ನಿಸಿದ್ದಾರೆ.

 

How many loans and how much that were given after May 2014 have become non-performing assets?

— P. Chidambaram (@PChidambaram_IN)
 
click me!