
ಬೀಜಿಂಗ್: ಮೋದಿ ಸರ್ಕಾರದ ಅಡಿಯಲ್ಲಿ ಭಾರತದ ವಿದೇಶಾಂಗ ನೀತಿ ಸ್ಪಂದನಶೀಲ ಮತ್ತು ಸಮರ್ಥನೀಯವಾಗಿದೆ ಎಂದು ಚೀನಾದ ಪ್ರಮುಖ ಚಿಂತಕರ ಚಾವಡಿಯೊಂದು ಬಣ್ಣಿಸಿದೆ.
ಕಳೆದ ಮೂರು ವರ್ಷಗಳಿಂದ ಭಾರತದ ರಾಜತಾಂತ್ರಿಕತೆ, ಸ್ಪಂದನಶೀಲ ಮತ್ತು ಸಮರ್ಥವಾಗಿದೆ. ನೂತನ ಸನ್ನಿವೇಶದಲ್ಲಿ ಭಾರತವನ್ನು ಒಂದು ಶ್ರೇಷ್ಠ ಶಕ್ತಿಯಾಗಿ ರೂಪಿಸುವಲ್ಲಿನ ಕಾರ್ಯ ತಂತ್ರ- ಮೋದಿ ಸಿದ್ಧಾಂತ ಮತ್ತು ವೈಶಿಷ್ಟ್ಯತೆಯನ್ನು ವಿದೇಶಾಂಗ ನೀತಿಯಲ್ಲಿ ಕಾಣಬಹುದಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದೊಂದಿಗೆ ಗುರುತಿಸಿಕೊಂಡಿರುವ ಚೀನಾ ಇನ್ಸ್‌ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್ (ಸಿಐಐಎಸ್) ಉಪಾಧ್ಯಕ್ಷ ರೊಂಗ್ ಯಿಂಗ್ ಹೇಳಿದ್ದಾರೆ.
ಚೀನಾದ ಚಿಂತಕರ ಚಾವಡಿ ಮೊದಲ ಬಾರಿಗೆ ಮೋದಿ ಸರ್ಕಾರದ ಬಗ್ಗೆ ಸಿಐಐಎಸ್ ಜರ್ನಲ್‌ನಲ್ಲಿ ಲೇಖನವೊಂದನ್ನು ಪ್ರಕಟಿಸಿದೆ. ಮೋದಿ ಪ್ರಧಾನಿಯಾದ ಬಳಿಕ ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಣೆ ಸ್ಥಿರತೆ ಕಾಪಾಡಿಕೊಂಡಿದೆ ಎಂದು ರೊಂಗ್ ಯಿಂಗ್ ಹೇಳಿದ್ದಾರೆ.
ಇತ್ತೀಚೆಗೆ ಮೋದಿ ಅವರ ದಾವೋಸ್ ಶೃಂಗದ ಭಾಷಣವನ್ನು ಚೀನಾ ಹೊಗಳಿತ್ತು. ಆರ್ಥಿಕ ರಕ್ಷಣಾ ನೀತಿ ವಿರೋಧಿಸುವ ನಿಲುವು ಸೂಕ್ತವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಬಣ್ಣಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.