
ಬೆಂಗಳೂರು(ಡಿ.7): ಹಾಲಿ ಸರ್ಕಾರದ ಕಾರ್ಯವೈಖರಿ ಯಾವಾಗಲೂ ಮುಂದಿನ ಚುನಾವಣೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅದರಲ್ಲೂ 5 ಅಥವಾ 10 ವರ್ಷ ಪೂರೈಸಿದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಕೂಡ ಬರಬಹುದು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿ ನಿಮಗೆ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಗೆ ಶೇ.58ರಷ್ಟು ಜನರು ಸಕಾರಾತ್ಮಕವಾಗಿ ಉತ್ತರಿಸಿರುವುದು ಬಹಳ ಮುಖ್ಯ ಸಂಗತಿ.
ಬಿಜೆಪಿ ಹಾಗೂ ಜೆಡಿಎಸ್‌ಗೆ ಇದು ಚಿಂತಾಜನಕ ವಿಚಾರ ಕೂಡ ಹೌದು. ಸಿದ್ದರಾಮಯ್ಯ ಸರ್ಕಾರದ ಸಾಧನೆ ತೃಪ್ತಿಕರವಾಗಿಲ್ಲ ಎಂದು ಹೇಳಿದವರು ಶೇ.39 ಜನರು ಮಾತ್ರ. ಶೇ.3ರಷ್ಟು ಜನ ಗೊತ್ತಿಲ್ಲ ಎಂದಿರುವುದರಿಂದ ಅವರು ಮತದಾನದ ವೇಳೆ ಯಾವ ಕಡೆ ಬೇಕಾದರೂ ವಾಲಬಹುದು.
ಆಶ್ಚರ್ಯಕರ ಸಂಗತಿ ಏನೆಂದರೆ, ಶೇ.49ರಷ್ಟು ಲಿಂಗಾಯತರು ಹಾಗೂ ಶೇ.45ರಷ್ಟು ಒಕ್ಕಲಿಗರು ಕೂಡ ಸಿದ್ದರಾಮಯ್ಯ ಸರ್ಕಾರದ ಆಡಳಿತ ಚೆನ್ನಾಗಿದೆ ಎಂದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ಗಳನ್ನು ಮತ್ತಷ್ಟು ಚಿಂತೆಗೆ ದೂಡುವ ಸಂಗತಿಯಿದು. ಕರ್ನಾಟಕ ರಾಜಕೀಯದ ಇತ್ತೀಚಿನ ಇತಿಹಾಸವನ್ನೇ ನೋಡುವುದಾದರೆ ಒಂದು ಸರ್ಕಾರ ಐದು ವರ್ಷ ಪೂರ್ಣಗೊಳಿಸುವಷ್ಟರಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತದೆ. ಆದರೆ ಸಿದ್ದರಾಮಯ್ಯ ವಿರುದ್ಧ ಅಂತಹ ಆಕ್ರೋಶ ರಾಚುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.