
ಬೆಂಗಳೂರು(ಡಿ.7): ಈ ಸರ್ಕಾರ ಮೊದಲ ವರ್ಷ ಪೂರೈಸಿದಾಗಿನಿಂದ ಪ್ರತಿವರ್ಷವೂ ಸಚಿವರು ಹೇಗೆ ಕೆಲಸ ಮಾಡಿದ್ದಾರೆಂಬುದರ ಮೌಲ್ಯಮಾಪನ ನಡೆಸಲಾಗುತ್ತದೆ ಎಂಬ ಸುದ್ದಿಗಳು ಬರುತ್ತಿದ್ದವು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಹೈಕಮಾಂಡ್ ಆಗಲಿ ಒಮ್ಮೆಯೂ ಅಂತಹ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲೇ ಇಲ್ಲ. ಈಗ ಜನರೇ ಮೌಲ್ಯಮಾಪನ ನಡೆಸಿದ್ದಾರೆ. ಒಟ್ಟಾರೆಯಾಗಿ ಶೇ.58ರಷ್ಟು ಜನರು ಸಿದ್ದರಾಮಯ್ಯ ಸಂಪುಟದ ಸಚಿವರ ಕಾರ್ಯವೈಖರಿ ಚೆನ್ನಾಗಿದೆಯೇ ಎಂಬ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.
ಶೇ.36 ಮಂದಿ ಮಾತ್ರ ನಕಾರಾತ್ಮಕ ಉತ್ತರ ನೀಡಿದ್ದಾರೆ. ಹಾಗಂತ ಇದು ಎಲ್ಲ ಸಚಿವರೂ ಖುಷಿಪಡುವ ವಿಚಾರವಲ್ಲ. ಏಕೆಂದರೆ, ಸಚಿವರ ವೈಯಕ್ತಿಕ ಮೌಲ್ಯಮಾಪನ ಇಲ್ಲಿ ನಡೆದಿಲ್ಲ. ಆದರೆ, ಒಟ್ಟಾರೆ ಸಿದ್ದರಾಮಯ್ಯ ಸರ್ಕಾರದ ಸಂಪುಟದ ಸಾಧನೆಯ ಬಗ್ಗೆ ಧನಾತ್ಮಕ ಉತ್ತರ ಬಂದಿದೆ ಎಂಬುದು ಕಾಂಗ್ರೆಸ್ಸಿಗೆ ಖುಷಿ ತರುವ ವಿಚಾರವಂತೂ ಹೌದು.
ಬಿಜೆಪಿ ಹಾಗೂ ಜೆಡಿಎಸ್’ನವರು ಸಚಿವರ ನಿಷ್ಕ್ರಿಯತೆ ಬಗ್ಗೆ ಪ್ರಚಾರ ಮಾಡುವ ಮುನ್ನ ಇದನ್ನೊಮ್ಮೆ ಗಮನಿಸಬೇಕಾಗಿ ಬರಬಹುದು. ಮಂತ್ರಿಗಳ ವೈಫಲ್ಯವನ್ನು ಜನರಿಗೆ ತೋರಿಸಲು ಪ್ರತಿಪಕ್ಷಗಳು ವಿ-ಲವಾಗಿರುವ ಸೂಚಕ ಇದು ಎಂದು ವ್ಯಾಖ್ಯಾನಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.