ನಿರ್ಭಯ ಪ್ರಕರಣದ ಕಂಪ್ಲೀಟ್ ಮಾಹಿತಿ ನಿಮ್ಮ ಮುಂದೆ

Published : May 05, 2017, 09:17 AM ISTUpdated : Apr 11, 2018, 12:44 PM IST
ನಿರ್ಭಯ ಪ್ರಕರಣದ ಕಂಪ್ಲೀಟ್ ಮಾಹಿತಿ ನಿಮ್ಮ ಮುಂದೆ

ಸಾರಾಂಶ

ರಾಷ್ಟ್ರರಾಜಧಾನಿಯಲ್ಲಿ ನಡೆದ ಈ ಹೇಯಕೃತ್ಯದ ಕಂಪ್ಲೀಟ್ ಮಾಹಿತಿ ನಿಮ್ಮ ಮುಂದೆ...  

ಬೆಂಗಳೂರು(ಮೇ.05): ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ 'ನಿರ್ಭಯ ಪ್ರಕರಣ'ದ ನಾಲ್ವರು ಅಪರಾಧಿಗಳಿಗೆ ದೇಶದ ಸರ್ವೋಚ್ಚ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ರಾಷ್ಟ್ರರಾಜಧಾನಿಯಲ್ಲಿ ನಡೆದ ಈ ಹೇಯಕೃತ್ಯದ ಕಂಪ್ಲೀಟ್ ಮಾಹಿತಿ ನಿಮ್ಮ ಮುಂದೆ...  

ಡಿಸೆಂಬರ್ 16, 2012 ನಡೆದದ್ದೇನು?

ರಾತ್ರಿ 9.00  - ಸ್ನೇಹಿತನೊಂದಿಗೆ ಬಸ್ ಸ್ಟಾಪ್ ನಲ್ಲಿ ನಿಂತಿದ್ದ ನಿರ್ಭಯಾ

ರಾತ್ರಿ 9.30 - ಇಬ್ಬರು 6 ಜನರುಳ್ಳ ಖಾಸಗಿ ಬಸ್ ಹತ್ತುತ್ತಾರೆ

ರಾತ್ರಿ 9.40 - ನಿರ್ಭಯಾಳನ್ನು ಪ್ರಶ್ನೆ ಮಾಡಿದ ಸಹ ಪ್ರಯಾಣಿಕ

ರಾತ್ರಿ 9.45 - ಮಾತಿನ ಮಧ್ಯೆ ನಿರ್ಭಯಾಳ ಜೊತೆ ಅಸಭ್ಯ ವರ್ತನೆ

ರಾತ್ರಿ 9.50 - ನಿರ್ಭಯಾಳನ್ನ ಪಾರು ಮಾಡಲು ಮುಂದಾದ ಸ್ನೇಹಿತ

ರಾತ್ರಿ 9.55 - ಕಬ್ಬಿಣದ ರಾಡಿನಿಂದ ನಿರ್ಭಯ ಸ್ನೇಹಿತನಿಗೆ ಥಳಿತ

 

ರಾತ್ರಿ 10.00 - ನಿರ್ಭಯಾಳ ಮೇಲೆ ಐವರಿಂದ ಅತ್ಯಾಚಾರಕ್ಕೆ ಯತ್ನ

ಅತ್ಯಾಚಾರಕ್ಕೆ ವಿರೋದಿಸಿದ್ದಕ್ಕೆ ನಿರ್ಭಯಾಳಿಗೆ ಸರಳುಗಳಿಂದ ಥಳಿತ

1 ಗಂಟೆ ಕಾಲ ಚಲಿಸುವ ಬಸ್​ನಲ್ಲಿ ಸಾಮೂಹಿಕ ಅತ್ಯಾಚಾರ

ಬಸ್ ಚಾಲಕ ಸೇರಿ ಆರು ಮಂದಿಯಿಂದ ಸಾಮೂಹಿಕ ಅತ್ಯಾಚಾರ

ನಿರ್ಭಯಾಳ ಮರ್ಮಾಂಗಕ್ಕೆ ಕಬ್ಬಿಣದ ಸರಳುಗಳಿಂದ ಚುಚ್ಚಿ ಹಲ್ಲೆ

ರಾತ್ರಿ 11.05 - ಇಬ್ಬರನ್ನು ವಿವಸ್ತ್ರಗೊಳಿಸಿ ಬಯಲು ಪ್ರದೇಶಕ್ಕೆ ಎಸೆತ

 

ರಾತ್ರಿ 1 ಘಂಟೆ ಸುಮಾರಿಗೆ ಸ್ಥಳಕ್ಕಾಗಮಿಸಿದ ಪೊಲೀಸರು

ಇಬ್ಬರನ್ನು ದೆಹಲಿ ಸಪ್ತರ್ಜಂಗ್ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

ಸಿಸಿಟಿವಿ ದಾಖಲೆ ಆಧಾರಿಸಿ 24 ಗಂಟೆಗಳೊಳಗೆ ದುಷ್ಕರ್ಮಿಗಳ ಸೆರೆ

ರಾಜಸ್ಥಾನದಲ್ಲಿ ಡ್ರೈವರ್ ರಾಮ್'​ಸಿಂಗ್ ಮತ್ತು ಮುಕೇಶ್ ಬಂಧನ

ವಿನಯ್ ಶರ್ಮಾ, ಪವನ್ ಗುಪ್ತಾ, ಅಪ್ರಾಪ್ತ ರಾಜು ದೆಹಲಿಯಲ್ಲಿ ಸೆರೆ

ಅರುಂಗಾಬಾದ್ ನಲ್ಲಿ ಆರನೇ ದುಷ್ಕರ್ಮಿ ಅಕ್ಷಯ್ ಠಾಕೂರ್ ಬಂಧನ

 

ಡಿ. 16 ಮಧ್ಯರಾತ್ರಿ ದೆಹಲಿಯ ಸಪ್ತರ್ಜಂಗ್ ಆಸ್ಪತ್ರೆಗೆ ದಾಖಲು

ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಿರ್ಭಯಾ

ಮರ್ಮಾಂಗದ ಮೂಲಕ ಹೊಟ್ಟೆಗೆ ಚುಚ್ಚಿಕೊಂಡಿದ್ದ ಕಬ್ಬಿಣದ ಸರಳು

ಡಿ.17 - ಉದರ ಸಂಬಂಧಿ ಚಿಕಿತ್ಸೆ ನಂತರ ವೆಂಟಿಲೇಟರ್'ಗೆ ಶಿಫ್ಟ್

ಡಿ.19 - ಕರುಳಿನಲ್ಲಿ ಗ್ಯಾಂಗರಿನ್ ತೊಂದರೆಯಿಂದ ಚಿಕಿತ್ಸೆ ವಿಫಲ

ಶೇ.95 ರಷ್ಟು ಕರುಳಿನ ಭಾಗ ಸಂಪೂರ್ಣ ಊನ

 

ಡಿ.21 - ಸರ್ಕಾರದಿಂದ ಅತ್ಯುತ್ತಮ ವೈದ್ಯಕೀಯ ಸಮಿತಿ ನೇಮಕ

ಡಿ. 25 ತೀವ್ರ ರಕ್ತಸ್ರಾವದಿಂದ ನಿರ್ಭಯಾ ದೇಹಸ್ಥಿತಿ ಗಂಭೀರ

ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪೂರ್ ಗೆ ರವಾನಿಸಲು ಸರ್ಕಾರದ ನಿರ್ಧಾರ

ಡಿ. 26 - ಸಿಂಗಪೂರ್ ನ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಶಿಫ್ಟ್

5 ಸರ್ಜರಿ ನಡೆದರೂ ಚಿಕಿತ್ಸೆಗೆ ಸ್ಪಂದಿಸದ ನಿರ್ಭಯಾ ದೇಹ ಸ್ಥಿತಿ

ಡಿ. 29 - ಮುಂಜಾನೆ 4.45 ರ ವೇಳೆಗೆ ನಿರ್ಭಯಾ ಕೊನೆಯುಸಿರು

 

ನಿರ್ಭಯಾ ಅತ್ಯಾಚಾರವನ್ನು ಖಂಡಿಸಿ ದೇಶದಾದ್ಯಂತ ಹೋರಾಟ

ರಾಷ್ಟ್ರ ರಾಜಧಾನಿಯಲ್ಲೇ ಆದ ಕರಾಳ ಕೃತ್ಯಕ್ಕೆ ತೀವ್ರ ವಿರೋಧ

ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಸಾರ್ವಜನಿಕರ ಒತ್ತಾಯ

ನಿರ್ಭಯಾ ಚೇತರಿಕೆಗಾಗಿ ಕ್ಯಾಂಡಲ್ ಹಚ್ಚಿ ಪ್ರಾರ್ಥನೆ

ವಿಕೃತ ಕಾಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನೆ

ಪ್ರತಿಭಟನೆ ತೀವ್ರತೆ ತಡೆಯಲು ಲಾಠಿ ಚಾರ್ಜ್​

 

ಆರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಪೊಲೀಸರು

ಡಿ. 21 ಆದಷ್ಟು ಬೇಗ ಚಾರ್ಜ್​ ಶೀಟ್ ಸಲ್ಲಿಸುವುದಾಗಿ ಸರ್ಕಾರದ ಭರವಸೆ

ಡಿ. 24 ವಾರದೊಳಗೆ ಚಾರ್ಜ್​ ಶೀಟ್ ಸಲ್ಲಿಸುತ್ತೇವೆಂದ ಪೊಲೀಸ್

ಡಿ. 27 ದೆಹಲಿ ಹೈ ಕೋರ್ಟ್​ ಕಮಿಟಿ ಜೊತೆ ಕೇಂದ್ರದ ಮಾತುಕತೆ

2013 ಜ. 2 - ನಿರ್ಭಯಾ ಕೇಸ್ ಕೈಗೆತ್ತಿಕೊಂಡ ದೆಹಲಿ ಸಾಕೇತ್ ಕೋರ್ಟ್​

ಅಪ್ರಾಪ್ತ ರಾಜುವಿಗೆ ಬಾಲಾಪರಾಧಿ ಕಾಯ್ದೆ ಅಡಿ ವಿಚಾರಣೆ

 

ತಿಹಾರ್ ಜೈಲಿನಲ್ಲಿ ಅತ್ಯಾಚಾರ ಆರೋಪಿಗಳ ನ್ಯಾಯಾಂಗ ಬಂಧನ

ಮಾರ್ಚ್​ 11, 2013 - ಜೈಲಿನಲ್ಲೇ ರಾಮ್'​​ಸಿಂಗ್ ಆತ್ಮಹತ್ಯೆ

2013 ಆಗಸ್ಟ್ 31 - ಬಾಲಾಪರಾಧಿ ರಾಜು ಗೆ 3 ವರ್ಷ ಶಿಕ್ಷೆ ಪ್ರಕಟ

ಆರೋಪಿಗಳ ಅಪರಾಧ ಸಾಬೀತು ಹಿನ್ನೆಲೆ ಶಿಕ್ಷೆ ಪ್ರಕಟ

ನಾಲ್ವರು ಆಪರಾಧಿಗಳಿಗೆ ಮರಣ ದಂಡನೆ ವಿಧಿಸಿದ್ದ ಸಾಕೇತ್ ಕೋರ್ಟ್​

ಮರಣದಂಡನೆ ಪ್ರಶ್ನಿಸಿ ಹೈ ಕೋರ್ಟ್​ ಮೆಟ್ಟಿಲೇರಿದ್ದ ಅಪರಾಧಿಗಳು

 

ದೆಹಲಿ ಹೈ ಕೋರ್ಟ್​ ಅಂಗಳದಲ್ಲಿ ಮರಣದಂಡನೆ ಕುರಿತು ವಿಚಾರಣೆ

2014 ಮಾರ್ಚ್​ 13 - ಗಲ್ಲು ಶಿಕ್ಷೆ ಎತ್ತಿ ಹಿಡಿದ ದೆಹಲಿ ಹೈ ಕೋರ್ಟ್​

2015 ಡಿ. 18 - ಬಾಲಾಪರಾಧಿ ಸಜೆ ನಂತರ ಪರಿವರ್ತನಾ ಕೇಂದ್ರಕ್ಕೆ ರವಾನೆ

ಹೈ ಕೋರ್ಟ್​ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಆಪರಾಧಿಗಳು

2017 ಮಾರ್ಚ್​ 27 - ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ

2017 ಮೇ 5 - ಇಂದು ಸುಪ್ರೀಂ ಕೋರ್ಟ್'ನ ತ್ರಿಸದಸ್ಯ ಪೀಠ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!