ಯುಪಿಯಲ್ಲೂ ಅಮ್ಮಾ ಮಾದರಿ ಕ್ಯಾಂಟೀನ್..!

By Suvarna Web DeskFirst Published May 5, 2017, 8:45 AM IST
Highlights

ಮಧ್ಯಾಹ್ನ ಹಾಗೂ ರಾತ್ರಿ ಉಟದ ವ್ಯವಸ್ಥೆಯಿರಲಿದ್ದು, ಜನರು ತಾವು ಬಯಸಿದಷ್ಟು ಆಹಾರವನ್ನು ಪಡೆಯಬಹುದಾಗಿದೆ. ಹಸಿವು ಮುಕ್ತ ಯುಪಿಗಾಗಿ ಈ ಯೋಜನೆ ಎಂದು ಸರ್ಕಾರ ಹೇಳಿದೆ.

ಲಖನೌ(ಮೇ.05): ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಉದ್ದೇಶದಿಂದ ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ಉತ್ತರಪ್ರದೇಶದಾದ್ಯಂತ 'ಅನ್ನಪೂರ್ಣ ಭೋಜನಾಲಯ'ಗಳನ್ನು ತೆರೆಯಲು ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ.

'ಅನ್ನಪೂರ್ಣ ಭೋಜನಾಲಯ'ದಲ್ಲಿ ದಲಿಯಾ, ಇಡ್ಲಿ ಸಾಂಬಾರ್, ಅವಲಕ್ಕಿಯಂತಹ ತಿಂಡಿಗಳು ಕೇವಲ ಮೂರು ರೂಪಾಯಿಗೆ ಮತ್ತು ರೋಟಿ, ದಾಲ್, ಅನ್ನ ಸಾಂಬಾರ್ 5 ರೂಪಾಯಿಗೆ ಒದಗಿಸಲು ಸರ್ಕಾರ ತೀರ್ಮಾನಿಸಿದೆ.

ಮಧ್ಯಾಹ್ನ ಹಾಗೂ ರಾತ್ರಿ ಉಟದ ವ್ಯವಸ್ಥೆಯಿರಲಿದ್ದು, ಜನರು ತಾವು ಬಯಸಿದಷ್ಟು ಆಹಾರವನ್ನು ಪಡೆಯಬಹುದಾಗಿದೆ. ಹಸಿವು ಮುಕ್ತ ಯುಪಿಗಾಗಿ ಈ ಯೋಜನೆ ಎಂದು ಸರ್ಕಾರ ಹೇಳಿದೆ.

click me!