
ಕೋಲ್ಕತಾ(ಮಾ. 10): ಧಾರ್ಮಿಕ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಕಾರಣವೊಡ್ಡಿ ಪಶ್ಚಿಮ ಬಂಗಾಳದ 125 ಶಾಲೆಗಳಿಗೆ ಅಲ್ಲಿಯ ರಾಜ್ಯ ಸರಕಾರ ನೋಟೀಸ್ ನೀಡಿದೆ. ಈ ಎಲ್ಲಾ ಶಾಲೆಗಳು ಆರೆಸ್ಸೆಸ್ ಸಂಘಟನೆಗೆ ಸೇರಿದವೆನ್ನಲಾಗಿದೆ. ಆರೆಸ್ಸೆಸ್'ನ 300 ಶಾಲೆಗಳು ಪಶ್ಚಿಮಬಂಗಾಳದಲ್ಲಿದ್ದು, ಅವುಗಳ ಪೈಕಿ 125 ಶಾಲೆಗಳು ಧಾರ್ಮಿಕ ಅಸಹಿಷ್ಣುತೆಯ ಮನೋಭಾವವನ್ನು ವಿದ್ಯಾರ್ಥಿಗಳಿಗೆ ಬಿತ್ತುತ್ತಿರುವುದು ಕಂಡುಬಂದಿದೆ. ಇವುಗಳ ಪೈಕಿ 96 ಶಾಲೆಗಳಿಗೆ ಸರಕಾರದಿಂದ ಪರವಾನಗಿಯೇ ಸಿಕ್ಕಿಲ್ಲ ಎಂದು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.
ಇದು ತನಿಖೆಯ ಮೊದಲ ಹಂತವಷ್ಟೇ. ಧಾರ್ಮಿಕ ಪ್ರಚೋದನೆಯಂತಹ ಕಾರ್ಯಗಳಲ್ಲಿ ತೊಡಗಿರುವ ಶಾಲೆಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಅಂಥವು ಕಂಡುಬಂದರೆ ಮುಚ್ಚಿಸುತ್ತೇವೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಈ ಶಾಲೆಗಳ ಮೇಲೆ ಕಣ್ಣಿಟ್ಟಿದ್ದಾರೆನ್ನಲಾಗಿದೆ.
(ಮಾಹಿತಿ: ಎನ್'ಡಿಟಿವಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.