ನನ್ನ ತಂದೆಯನ್ನು ಏಕೆ ಕೊಂದಿರಿ: ಕೇರಳ ಸರ್ಕಾರಕ್ಕೆ 12 ವರ್ಷದ ಬಾಲಕಿಯ ಪ್ರಶ್ನೆ

By Suvarna Web DeskFirst Published Mar 10, 2017, 8:56 AM IST
Highlights

ತಂದೆ ಮರಣ ಹೊಂದಿರುವ ಕಾರಣ ಈಕೆಯ ವಿದ್ಯಾಭ್ಯಾಸಕ್ಕೆ ಸಮಸ್ಯೆಯುಂಟಾಗಿದೆ. ಈ ವಿಡಿಯೋ ಮೂಲಕ ತನ್ನ ನೋವನ್ನು ತೋರ್ಪಡಿಸಿಕೊಂಡಿದ್ದಾಳೆ. ಕಣ್ಣೂರು ರಾಜಕೀಯ ದ್ವೇಷದ ದಳ್ಳುರಿಯಾಗಿ ಮಾರ್ಪಟ್ಟಿದೆ. ಎಡಪಕ್ಷ ಅಧಿಕಾರಕ್ಕೆ ಬಂದ ಕಳೆದ ಒಂದು ವರ್ಷದಲ್ಲಿ ನಾಲ್ವರು ಬಿಜೆಪಿ ಹಾಗೂ ಮೂವರು ಸಿಪಿಎಂ ಕಾರ್ಯಕರ್ತರು ಕೊಲೆಯಾಗಿದ್ದಾರೆ.

ಕಣ್ಣೂರು(ಮಾ.10): ಸಿಪಿಐಎಂ ಹಾಗೂ ಬಿಜೆಪಿ ಕಾರ್ಯಕರ್ತರ ಗಲಭೆಯಲ್ಲಿ ತಂದೆಯನ್ನು ಕಳೆದುಕೊಂಡ 12 ವರ್ಷದ ಬಾಲಕಿಯೊಬ್ಬಳು ಕೇರಳ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದು ಈ ವಿಡಿಯೋ ದೇಶಾದ್ಯಂತ ವೈರಲ್ ಆಗಿದೆ.

ಬಾಲಕಿ ವಿಸ್ಮಯಳ ತಂದೆ 52 ವರ್ಷದ ಸಂತೋಷ್ ಕುಮಾರ್ ಎಂಬುವವರನ್ನು ಜನವರಿಯಲ್ಲಿ ಅವರ ಮನೆಯದುರೆ ಇರಿದು ಕೊಲ್ಲಲಾಗಿತ್ತು.ಈ ಬಗ್ಗೆ 8ನೇ ತರಗತಿ ಓದುತ್ತಿರುವ ಬಾಲಕಿ ವಿಡಿಯೋ ಮೂಲಕ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾಳೆ.

Latest Videos

ವಿಡಿಯೋದಲ್ಲಿ ಬಾಲಕಿ ಹೇಳಿರುವ ಸಂಕ್ಷಿಪ್ತ ವಿವರಣೆ ಈ ರೀತಿಯಿದೆ.

'ನನ್ನ ತಂದೆ ನನ್ನ ಕನಸನ್ನು ಸಾಕಾರಗೊಳಿಸಲು ಉತ್ಸುಕರಾಗಿದ್ದರು. ಆದರೆ ಆ ಒಂದು ರಾತ್ರಿ ನನ್ನ ಕನಸುಗಳೆಲ್ಲವೂ ನುಚ್ಚುನೂರಾದವು.  ಅವರು ಮಾಡಿದ ಒಂದು ತಪ್ಪು ಆರ್'ಎಸ್'ಎಸ್ ಹಾಗೂ ಬಿಜೆಪಿಯನ್ನು ಬೆಂಬಲಿಸಿದ್ದು. ನನ್ನ ಭವಿಷ್ಯ ಈಗ ಕತ್ತಲಲ್ಲಿದೆ.ಅವರು ನನ್ನ ತಂದೆಯನ್ನು ಮಾತ್ರ ಕೊಲ್ಲದೆ ನನ್ನ ಕನಸು ಹಾಗೂ ನನ್ನ ಭವಿಷ್ಯವನ್ನು ಕೊಂದಿದ್ದಾರೆ. ನನಗೀಗ ಕತ್ತಲು ಮಾತ್ರ ಕಾಣುತ್ತಿದೆ. ನನಗೀಗಲೂ ತಿಳಿಯುತ್ತಿಲ್ಲ. ಅವರು ನನ್ನ ತಂದೆಯನ್ನು ಏಕೆ ಕೊಂದರು ಎಂದು' ತಿಳಿಸಿದ್ದಾಳೆ.

ತಂದೆ ಮರಣ ಹೊಂದಿರುವ ಕಾರಣ ಈಕೆಯ ವಿದ್ಯಾಭ್ಯಾಸಕ್ಕೆ ಸಮಸ್ಯೆಯುಂಟಾಗಿದೆ. ಈ ವಿಡಿಯೋ ಮೂಲಕ ತನ್ನ ನೋವನ್ನು ತೋರ್ಪಡಿಸಿಕೊಂಡಿದ್ದಾಳೆ. ಕಣ್ಣೂರು ರಾಜಕೀಯ ದ್ವೇಷದ ದಳ್ಳುರಿಯಾಗಿ ಮಾರ್ಪಟ್ಟಿದೆ. ಎಡಪಕ್ಷ ಅಧಿಕಾರಕ್ಕೆ ಬಂದ ಕಳೆದ ಒಂದು ವರ್ಷದಲ್ಲಿ ನಾಲ್ವರು ಬಿಜೆಪಿ ಹಾಗೂ ಮೂವರು ಸಿಪಿಎಂ ಕಾರ್ಯಕರ್ತರು ಕೊಲೆಯಾಗಿದ್ದಾರೆ.

ಪೊಲೀಸರ ವರದಿಗಳ ಪ್ರಕಾರ ಕಳೆದ 26 ವರ್ಷದಲ್ಲಿ ಕಣ್ಣೂರಿನಲ್ಲಿ ರಾಜಕೀಯ ದ್ವೇಷದಿಂದ 100 ಮಂದಿ ಮೃತಪಟ್ಟಿದ್ದು, ಅವರಲ್ಲಿ 42 ಸಿಪಿಎಂ ಹಾಗೂ 41 ಬಿಜೆಪಿ ಕಾರ್ಯಕರ್ತರಾಗಿದ್ದಾರೆ.

click me!