
ಕೊಯಮತ್ತೂರು(ಜೂ.20): ವಿವಾದಾತ್ಮಕ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರನ್ನು ಪಶ್ಚಿಮ ಬಂಗಾಳದ ಸಿಐಡಿ ತಂಡ ಕೊಯಮತ್ತೂರಿನಲ್ಲಿ ಬಂಧಿಸಿದ್ದು, ನಾಳೆ ಕೋಲ್ಕತ್ತಾಗೆ ಕರೆತರಲಾಗುತ್ತದೆ ಎಂದು ಡಿಎನ್'ಎ ವೆಬ್'ಸೈಟ್ ವರದಿ ಮಾ
ಪಶ್ಚಿಮ ಬಂಗಾಳದ ಹೈಕೋರ್ಟ್'ನ ನ್ಯಾಯಮೂರ್ತಿಯಾಗಿದ್ದ ಕರ್ಣನ್ ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅತೀ ಹೆಚ್ಚು ವಿವಾದಕ್ಕೊಳಗಾಗದವರು. ಇವರ ವಿವಾದಾತ್ಮಕ ಹೇಳಿಕೆಗಳಿಂದ ನ್ಯಾಯಾಂಗ ವ್ಯವಸ್ಥೆಯೆ ತಲೆ ತಗ್ಗಿಸುವಂತಾಗಿತ್ತು. ಸುಪ್ರಿಂ ಮುಖ್ಯ ನ್ಯಾಯಾಧೀಶರು ಸೇರಿದಂತೆ 7 ನ್ಯಾಯಾಧೀಶರ ವಿರುದ್ಧವೇ ಬಂಧನದ ವಾರಂಟ್ ಹೊರಡಿಸಿದ್ದರು.
ಈ ತೀರ್ಪನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಮೇ 9 ರಂದು ಕರ್ಣನ್ ಅವರನ್ನು ನ್ಯಾಯಾಂಗ ನಿಂದನೆಯ ಆಪಾದನೆಯ ಮೇಲೆ 6 ತಿಂಗಳ ಜೈಲು ವಾಸದ ಶಿಕ್ಷೆ ವಿಧಿಸಿತ್ತು. ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ಹೈಕೋರ್ಟ್'ನ ಹಾಲಿ ಮುಖ್ಯ ನ್ಯಾಯಾಧೀಶರೊಬ್ಬರನ್ನು ಜೈಲು ಶಿಕ್ಷೆಗೆ ಒಳಪಡಿಸಿದ್ದು ಇದೆ ಮೊದಲಾಗಿತ್ತು. ಅಂದಿನಿಂದ ತಲೆ ತಪ್ಪಿಸಿಕೊಂಡಿದ್ದ ಇವರು ಇಂದು ಬಂಧಿತರಾಗಿದ್ದಾರೆ. ಅದಲ್ಲದೆ ಜೂನ್ 12 ರಂದು ಇವರ ಅಧಿಕಾರವಧಿ ಮುಕ್ತಾಯವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.