ಜಂತಕಲ್ ಮೈನಿಂಗ್ ಪ್ರಕರಣ: ಹೆಚ್'ಡಿಕೆಗೆ ಮತ್ತೆ ರಿಲೀಫ್

By Suvarna Web DeskFirst Published Jun 20, 2017, 7:43 PM IST
Highlights

ಹೆಚ್'ಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರು ಈಗಾಗಲೇ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಜೂ.28ರವರೆಗೂ ಮುಂದುವರಿಸಿದರು. ತನಿಖೆ ಅಗತ್ಯವಿದ್ದಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಿದರು.

ಬೆಂಗಳೂರು(ಜೂ.20): ಜಂತಕಲ್ ಮೈನಿಂಗ್ ಅಕ್ರಮ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರಿಗೆ ಮತ್ತೆ ರಿಲೀಫ್ ಸಿಕ್ಕಿದೆ.  

ಹೆಚ್'ಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರು ಈಗಾಗಲೇ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಜೂ.28ರವರೆಗೂ ಮುಂದುವರಿಸಿದರು. ತನಿಖೆ ಅಗತ್ಯವಿದ್ದಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಿದರು.

ಜಂತಕಲ್ ಮೈನಿಂಗ್ ಮಾಲೀಕರು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅಕ್ರಮ ನಡೆದಿರುವ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ. ಇದೆ ಪ್ರಕರಣದ ತನಿಖೆಯನ್ನ ಈಗಾಗಲೇ ಹೈಕೋರ್ಟ್ ರದ್ದುಗೊಳಿಸಿ ಆದೇಶ ನೀಡಿತ್ತು.  ಒಂದೇ ಪ್ರಕರಣಕ್ಕೆ ಎರಡು ಎಫ್ಐಆರ್ ದಾಖಲಿಸಲು ಸಾಧ್ಯವಿಲ್ಲ. ಎಚ್​ಡಿಕೆ ತನಿಖೆಗೆ ಸಹಕರಿಸುತ್ತಿದ್ದು ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಎಚ್​.ಡಿ. ಕುಮಾರಸ್ವಾಮಿ ಪರ ವಕೀಲರು ವಾದ ಮಂಡಿಸಿದರು.

ಹೆಚ್'ಡಿಕೆ ಅಕ್ರಮದಲ್ಲಿ ಭಾಗಿರುವ ಸಂಬಂಧ ಇತರೆ ಆರೋಪಿಗಳು ಹೇಳಿಕೆ ನೀಡಿದ್ದು, ಅವರನ್ನು ಬಂಧಿಸಿ ವಿಚಾರಣೆ ಮಾಡುವ ಅಗತ್ಯವಿದೆ. ಪ್ರಕರಣ ಕುರಿತು ಸಾಕಷ್ಟು ಸಾಕ್ಷ್ಯ ಕಲೆ ಹಾಕಲಾಗಿದ್ದು, ಎಚ್​ಡಿಕೆಗೆ ನಿರೀಕ್ಷಣಾ ಜಾಮೀನು ನೀಡದಂತೆ SIT ವಕೀಲರ ಮನವಿ ಮಾಡಿದ್ದರು. ಆದರೆ ಇವರ ವಾದವನ್ನು ನ್ಯಾಯಾಧೀಶರು ತಳ್ಳಿ ಹಾಕಿದರು.

click me!