ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ: ಧರ್ಮ ಸಂಸತ್'ನಲ್ಲಿ ಘೋಷಣೆ

By Suvarna Web DeskFirst Published Nov 24, 2017, 4:14 PM IST
Highlights

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ ಎಂದು ಧರ್ಮಸಂಸತ್'​ನಲ್ಲಿ ಮೋಹನ್ ಭಾಗವತ್ ಘೋಷಿಸಿದ್ದಾರೆ.  ರಾಮಮಂದಿರ ವಿವಾದ ಬಗೆಹರಿಯುವ ಹಂತಕ್ಕೆ ಬಂದಿದೆ.  ಹಲವು ವರ್ಷಗಳ ಪ್ರಯತ್ನದ ಪರಿಣಾಮ ವಿವಾದ ಬಗೆಹರಿಯಲಿದೆ.  ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ.  ರಾಮಮಂದಿರ ಬಿಟ್ಟು ಬೇರೆ ಏನು ನಿರ್ಮಾಣವಾಗಲ್ಲ. ಇದು ನಮ್ಮ ಜನಪ್ರಿಯ ಘೋಷಣೆ ಅಲ್ಲ ಇದು ನಮ್ಮ ಬದ್ದತೆ. ಇಂದು ನಾವು ಹೇಳುವ ಪ್ರತೀ ಮಾತು ಕೂಡ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಕಾರಣಕ್ಕೆ ಹೇಳುತ್ತಿದ್ದೇನೆ ರಾಮ ಮಂದಿರ ನಿರ್ಮಾಣ ಖಚಿತ ಎಂದು  ಉಡುಪಿ ಧರ್ಮಸಂಸತ್​ನಲ್ಲಿ ಮೋಹನ್ ಭಾಗವತ್ ಹೇಳಿದ್ದಾರೆ.

ಉಡುಪಿ (ನ.24): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ ಎಂದು ಧರ್ಮಸಂಸತ್'​ನಲ್ಲಿ ಮೋಹನ್ ಭಾಗವತ್ ಘೋಷಿಸಿದ್ದಾರೆ.  ರಾಮಮಂದಿರ ವಿವಾದ ಬಗೆಹರಿಯುವ ಹಂತಕ್ಕೆ ಬಂದಿದೆ.  ಹಲವು ವರ್ಷಗಳ ಪ್ರಯತ್ನದ ಪರಿಣಾಮ ವಿವಾದ ಬಗೆಹರಿಯಲಿದೆ.  ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ.  ರಾಮಮಂದಿರ ಬಿಟ್ಟು ಬೇರೆ ಏನು ನಿರ್ಮಾಣವಾಗಲ್ಲ. ಇದು ನಮ್ಮ ಜನಪ್ರಿಯ ಘೋಷಣೆ ಅಲ್ಲ ಇದು ನಮ್ಮ ಬದ್ದತೆ. ಇಂದು ನಾವು ಹೇಳುವ ಪ್ರತೀ ಮಾತು ಕೂಡ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಕಾರಣಕ್ಕೆ ಹೇಳುತ್ತಿದ್ದೇನೆ ರಾಮ ಮಂದಿರ ನಿರ್ಮಾಣ ಖಚಿತ ಎಂದು  ಉಡುಪಿ ಧರ್ಮಸಂಸತ್​ನಲ್ಲಿ ಮೋಹನ್ ಭಾಗವತ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಂದು ವರ್ಷದ ಡೆಡ್​ಲೈನ್​ ಇದೆ.  2019 ರ ಒಳಗೆ ರಾಮಮಂದಿರ ನಿರ್ಮಾಣವಾಗಲಿದೆ.  ರಾಮಮಂದಿರ ನಿರ್ಮಾಣಕ್ಕೆ ವಾತಾವರಣ ಅನುಕೂಲಕರವಾಗಿದೆ.  ಕೋರ್ಟ್, ಸಂಧಾನ, ವಿಧೇಯಕದ ಮೂಲಕ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ.  ರಾಮನ ವಿಗ್ರಹ ಈಗ ಕಾರಾಗೃಹದಲ್ಲಿರುವಂತೆ ಇದೆ.  ಈ ಕಾರಣದಿಂದ ರಾಮಮಂದಿರ ನಿರ್ಮಾಣವಾಗಬೇಕಿದೆ.  ರಾಮಮಂದಿರ ನಿರ್ಮಾಣವಾಗುವುದು ಖಚಿತ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಒಂದು ವೇಳೆ ಸುಪ್ರೀಂಕೋರ್ಟ್'ನಲ್ಲಿ ಪ್ರಕರಣ ಇತ್ಯರ್ಥವಾಗುವುದು ತಡವಾದರೆ, ನಾವು ಮುಸ್ಲೀಂ ಸಂಘಟನೆಗಳೋಂದಿಗೆ ಸೌಹಾರ್ದಯುತವಾಗಿ ಮಾತುಕತೆ ಮೂಲಕ ಪರಿಹರಿಸೊಕೊಳ್ಳುತ್ತೇವೆ. ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ರಾಮಮಂದಿರ ನಿರ್ಮಾಣದ ಬಗ್ಗೆ ವಿಶೇಷ ವಿಧೇಯಕ ತರಬೇಕು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

 

click me!