ಪ್ರವಾಸಿಗರ ಸ್ವರ್ಗ ಶಿಮ್ಲಾದಲ್ಲಿ ನೀರಿಗೆ ಹಾಹಾಕಾರ!

First Published Jun 2, 2018, 8:13 AM IST
Highlights

ಕೆಲ ತಿಂಗಳ ಹಿಂದೆ ದಕ್ಷಿಣ ಆಫ್ರಿಕಾರ ಕೇಪ್‌ಟೌನ್‌ನಲ್ಲಿ ನೀರಿಗಾಗಿ ಭಾರಿ ಕೋಲಾಹಲವೇ ಎದ್ದಿತ್ತು. ಈಗ ಅಂತದ್ದೇ ಪರಿಸ್ಥಿತಿ ಪ್ರವಾಸಿಗರ ಸ್ವರ್ಗ ಹಿಮಾಚಲ ಪ್ರದೇಶದ ಶಿಮ್ಲಾದಲ್ಲೂ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಶಿಮ್ಲಾದಲ್ಲಿ ಪರಿಸ್ಥಿತಿ ಯಾವ ಮಟ್ಟಮುಟ್ಟಿದೆ ಎಂದರೆ, ಪ್ರವಾಸಿಗರೇ ಇಲ್ಲಿಗೆ ಬರಬೇಡಿ ಎಂದು ಸ್ಥಳೀಯರು ಬೇಡಿಕೊಳ್ಳತೊಡಗಿದ್ದಾರೆ.

ಶಿಮ್ಲಾ (ಜೂ. 02): ಕೆಲ ತಿಂಗಳ ಹಿಂದೆ ದಕ್ಷಿಣ ಆಫ್ರಿಕಾರ ಕೇಪ್‌ಟೌನ್‌ನಲ್ಲಿ ನೀರಿಗಾಗಿ ಭಾರಿ ಕೋಲಾಹಲವೇ ಎದ್ದಿತ್ತು. ಈಗ ಅಂತದ್ದೇ ಪರಿಸ್ಥಿತಿ ಪ್ರವಾಸಿಗರ ಸ್ವರ್ಗ ಹಿಮಾಚಲ ಪ್ರದೇಶದ ಶಿಮ್ಲಾದಲ್ಲೂ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಶಿಮ್ಲಾದಲ್ಲಿ ಪರಿಸ್ಥಿತಿ ಯಾವ ಮಟ್ಟಮುಟ್ಟಿದೆ ಎಂದರೆ, ಪ್ರವಾಸಿಗರೇ ಇಲ್ಲಿಗೆ ಬರಬೇಡಿ ಎಂದು ಸ್ಥಳೀಯರು ಬೇಡಿಕೊಳ್ಳತೊಡಗಿದ್ದಾರೆ.

ಇನ್ನೊಂದೆಡೆ ಪ್ರವಾಸಿಗರಿಗೆ ನೀರು ಬಳಕೆಗೆ ಮಿತಿ ಹೇರಲಾಗಿದ್ದು, ಸ್ಥಳೀಯಾಡಳಿತ ನೀರಿನ ಬಿಲ್‌ ಕಟ್ಟಡದ ಹೋಟೆಲ್‌ಗಳ ನೀರಿನ ಸಂಪರ್ಕವನ್ನೂ ಕಡಿತ ಮಾಡಿದೆ. ಹೋಟೆಲ್‌ಗಳಲ್ಲಿ ಪ್ರವಾಸಿಗರಿಂದ ನೀರಿನ ಬಾಟಲ್‌ಗಳಿಗೆ ಹೆಚ್ಚು ಬೆಲೆ ಪಡೆಯಲಾಗುತ್ತಿದೆ. ಅಲ್ಲದೆ ನೀರಿನ ಬಳಕೆಗೆ ಮಿತಿ ಹೇರಲಾಗಿದ್ದು, ಬಕೆಟ್‌ಗಳಲ್ಲಿ ನೀರು ಕೊಡಲಾಗುತ್ತಿದೆ. ಪ್ರವಾಸಕ್ಕೆ ಆಗಮಿಸಿದವರೂ ನೀರಿನ ಸಮಸ್ಯೆಯಿಂದಾಗಿ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹಿಂದಿರುಗುತ್ತಿದ್ದಾರೆ. ಮತ್ತೊಂದೆಡೆ ಹೋಟೆಲ್‌ಗಳು ಈಗಾಗಲೇ ಮಾಡಿರುವ ಬುಕ್ಕಿಂಗ್‌ಗಳನ್ನೂ ರದ್ದು ಮಾಡುತ್ತಿವೆ.

ತಾವು ತಂಗಿದ್ದ ಹೋಟೆಲ್‌ನಲ್ಲಿ 3,500 ರು. ಪಾವತಿಸಿದ್ದರೂ, ಒಂದೇ ಬಕೆಟ್‌ ನೀರು ನೀಡಲಾಗಿದೆ. ಒಂದು ಬಾಟಲಿ ನೀರಿಗೆ 42 ರು. ನೀಡಿದ್ದೇನೆ ಎಂದು ಪ್ರವಾಸಿಗರೊಬ್ಬರು ಹೇಳುತ್ತಾರೆ. ಇದೇ ಅನುಭವ ಹಲವು ಪ್ರವಾಸಿಗರಿಗೆ ಆಗಿರುವುದರಿಂದ, ಅವರು ಪ್ರವಾಸ ಮೊಟಕುಗೊಳಿಸಿ ಹಿಂದಿರುಗಿದ್ದಾರೆ.

ಮತ್ತೊಂದೆಡೆ ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆ ಹೇರಲಾಗಿದ್ದು, ವಾಹನ ತೊಳೆಯಲು ನೀರು ಬಳಸುವುದನ್ನೂ ನಿಷೇಧಿಸಲಾಗಿದೆ. 

click me!