ಗಾಸಿಪ್‌ ತಡೆಗೆ ವಾಟ್ಸಪ್‌, ಫೇಸ್‌ಬುಕ್‌ ತೆರಿಗೆ ಜಾರಿ

First Published Jun 2, 2018, 8:04 AM IST
Highlights

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳು ವದಂತಿಗಳ ತಾಣವಾಗಿರುವುದು, ಸಾಕಷ್ಟುಅನಾಹುತಕ್ಕೆ ಕಾರಣವಾಗಿರುವುದು ಎಲ್ಲರ ಅರಿವಿಗೆ ಬಂದಿದೆ. ವಿಶೇಷವೆಂದರೆ ಇಂಥ ವದಂತಿ ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಆಫ್ರಿಕಾದ ಉಗಾಂಡಾ ದೇಶದಲ್ಲಿ ಫೇಸ್‌ಬುಕ್‌, ವಾಟ್ಸಪ್‌, ವೈಬರ್‌, ಟ್ವೀಟರ್‌ ಬಳಕೆದಾರರ ಮೇಲೆ ದೈನಂದಿನ ತೆರಿಗೆ ಹೇರಲು ಸರ್ಕಾರ ನಿರ್ಧರಿಸಿದೆ. 

ಕಂಪಾಲ (ಜೂ. 02): ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳು ವದಂತಿಗಳ ತಾಣವಾಗಿರುವುದು, ಸಾಕಷ್ಟುಅನಾಹುತಕ್ಕೆ ಕಾರಣವಾಗಿರುವುದು ಎಲ್ಲರ ಅರಿವಿಗೆ ಬಂದಿದೆ. ವಿಶೇಷವೆಂದರೆ ಇಂಥ ವದಂತಿ ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಆಫ್ರಿಕಾದ ಉಗಾಂಡಾ ದೇಶದಲ್ಲಿ ಫೇಸ್‌ಬುಕ್‌, ವಾಟ್ಸಪ್‌, ವೈಬರ್‌, ಟ್ವೀಟರ್‌ ಬಳಕೆದಾರರ ಮೇಲೆ ದೈನಂದಿನ ತೆರಿಗೆ ಹೇರಲು ಸರ್ಕಾರ ನಿರ್ಧರಿಸಿದೆ.

ಈ ಕುರಿತ ಮಸೂದೆಯೊಂದನ್ನು ಅಲ್ಲಿನ ಸಂಸತ್‌ ಅಂಗೀಕರಿಸಿದೆ. ಪ್ರಸ್ತಾವದ ಪ್ರಕಾರ ಮೇಲ್ಕಂಡ ಎಲ್ಲಾ ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಪ್ರತಿ ದಿನ ಕನಿಷ್ಟ3 ರು.ನಷ್ಟುತೆರಿಗೆ ಹೇರಲಾಗುವುದು. ಆದರೆ ನಿತ್ಯವೂ ಬಳಕೆದಾರರ ಮೇಲೆ ತೆರಿಗೆ ಹೇರುವುದು ಹೇಗೆ ಎಂಬುದು ಬಹಿರಂಗವಾಗಿಲ್ಲ. ಸೋಷಿಯಲ್‌ ಮೀಡಿಯಾಗಳು ಗಾಸಿಪ್‌ಗೆ ಉತ್ತೇಜನ ನೀಡುತ್ತವೆ.

ಹೀಗಾಗಿ ಜುಲೈ 1ರಿಂದ ಹೊಸ ತೆರಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಯೋವೇರಿ ಮ್ಯುಸೇವ್ನಿ ಹೇಳಿದ್ದಾರೆ. ಮತ್ತೊಂದೆಡೆ ಹಣದ ತೀವ್ರ ಕೊರತೆ ಎದುರಿಸುತ್ತಿರುವ ಸರ್ಕಾರ ಹೊಸ ಆದಾಯಕ್ಕಾಗಿ ಈ ಮಾರ್ಗ ಹಿಡಿದಿದೆ ಎಂಬ ವಾದಗಳೂ ಇದೆ.

click me!