(ವಿಡಿಯೋ)ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವರದಿಗಾರನಿಗೆ ಹಿಗ್ಗಾಮುಗ್ಗ ಥಳಿಸಿದನೀತ!: ಕಾರಣವೇನು ಗೊತ್ತಾ?

Published : Aug 07, 2017, 03:40 PM ISTUpdated : Apr 11, 2018, 12:45 PM IST
(ವಿಡಿಯೋ)ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವರದಿಗಾರನಿಗೆ ಹಿಗ್ಗಾಮುಗ್ಗ ಥಳಿಸಿದನೀತ!: ಕಾರಣವೇನು ಗೊತ್ತಾ?

ಸಾರಾಂಶ

ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲಾತಾಣಗಳಲ್ಲಿ ಸುದ್ದಿ ವಾಹಿನಿಯಲ್ಲಿ ಲೈವ್ ಇರುವಂತಹ ಸಂದರ್ಭದಲ್ಲಿ ನಿರೂಪಕರು ಗಂಭೀರವಾಗಿ ಸುದ್ದಿ ಓದುತ್ತಿರುವ, ಕೂದಲು ಸರಿ ಮಾಡಿಕೊಳ್ಳುವ ಮತ್ತು ಇನ್ನಿತರ ಕೆಲಸಗಳಲ್ಲಿ ತೊಡಗಿಕೊಂಡಿರುವ ವಿಡಿಯೋಗಳು ಹರಿದಾಡುತ್ತಿರುತ್ತವೆ. ವಾಸ್ತವವಾಗಿ ಅವರಿಗೆ ಲೈವ್ ಪ್ರಸಾರವಾಗುತ್ತಿದೆ ಎಂಬ ವಿಚಾರ ತಿಳಿಯದೆ ಇಂತಹ ಘಟನೆಗಳು ನಡೆಯುತ್ತವೆ. ಇನ್ನು ವರದಿಗಾರರ ವಿಚಾರವನ್ನು ನೋಡುವುದಾದರೆ ಕೆಲವರು ವರದಿ ಮಾಡುವ ಭರದಲ್ಲಿ ತೊದಲಿದರೆ ಇನ್ನು ಕೆಲವರು ಎಡವಿ ಬೀಳುತ್ತಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಲಾತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ನೋಡಿ ಹೀಗೂ ನಡೆಯುತ್ತಾ? ಎಂದು ಪ್ರಶ್ನಿಸಲಾರಂಭಿಸುತ್ತೀರಿ. ಆದರೆ ಸದ್ಯ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವರದಿಗಾರನೊಬ್ಬನಿಗೆ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಷ್ಟಕ್ಕೂ ಅಲ್ಲಿ ನಿಜಕ್ಕೂ ನಡೆದದ್ದೇನು? ಆ ವ್ಯಕ್ತಿ ವರದಿಗಾರನಿಗೆ ಥಳಿಸಿದ್ದೇಕೆ? ಇಲ್ಲಿದೆ ವಿವರ

ನವದೆಹಲಿ(ಆ.07): ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲಾತಾಣಗಳಲ್ಲಿ ಸುದ್ದಿ ವಾಹಿನಿಯಲ್ಲಿ ಲೈವ್ ಇರುವಂತಹ ಸಂದರ್ಭದಲ್ಲಿ ನಿರೂಪಕರು ಗಂಭೀರವಾಗಿ ಸುದ್ದಿ ಓದುತ್ತಿರುವ, ಕೂದಲು ಸರಿ ಮಾಡಿಕೊಳ್ಳುವ ಮತ್ತು ಇನ್ನಿತರ ಕೆಲಸಗಳಲ್ಲಿ ತೊಡಗಿಕೊಂಡಿರುವ ವಿಡಿಯೋಗಳು ಹರಿದಾಡುತ್ತಿರುತ್ತವೆ. ವಾಸ್ತವವಾಗಿ ಅವರಿಗೆ ಲೈವ್ ಪ್ರಸಾರವಾಗುತ್ತಿದೆ ಎಂಬ ವಿಚಾರ ತಿಳಿಯದೆ ಇಂತಹ ಘಟನೆಗಳು ನಡೆಯುತ್ತವೆ. ಇನ್ನು ವರದಿಗಾರರ ವಿಚಾರವನ್ನು ನೋಡುವುದಾದರೆ ಕೆಲವರು ವರದಿ ಮಾಡುವ ಭರದಲ್ಲಿ ತೊದಲಿದರೆ ಇನ್ನು ಕೆಲವರು ಎಡವಿ ಬೀಳುತ್ತಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಲಾತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ನೋಡಿ ಹೀಗೂ ನಡೆಯುತ್ತಾ? ಎಂದು ಪ್ರಶ್ನಿಸಲಾರಂಭಿಸುತ್ತೀರಿ. ಆದರೆ ಸದ್ಯ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವರದಿಗಾರನೊಬ್ಬನಿಗೆ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಷ್ಟಕ್ಕೂ ಅಲ್ಲಿ ನಿಜಕ್ಕೂ ನಡೆದದ್ದೇನು? ಆ ವ್ಯಕ್ತಿ ವರದಿಗಾರನಿಗೆ ಥಳಿಸಿದ್ದೇಕೆ? ಇಲ್ಲಿದೆ ವಿವರ

ವರದಿಗಾರನಿಗೇ ಶಾಕ್!

ವೈರಲ್ ಆಗಿರುವ ವಿಡಿಯೋದಲ್ಲಿ ದಾಖಲಾದ ಈ ಘಟನೆ ಮಾಸ್ಕೋದಲ್ಲಿ ನಡೆದಿದ್ದು, ನಿರೂಪಕಿ ಹಾಗೂ ವರದಿಗಾರನ ಯಾವುದೇ ತಪ್ಪಿಲ್ಲದಿದ್ದರೂ ರಿಪೋರ್ಟರ್ ಮೇಲೆರಗಿದ ಅನಾಮಿಕ ವ್ಯಕ್ತಿ ಆತನಿಗೆ ಭರ್ಜರಿಯಾಗಿ ಗೂಸಾ ನೀಡಿದ್ದಾನೆ. ಮಾಸ್ಕೋದ ಪಾರ್ಕ್ ಒಂದರಲ್ಲಿ ವಾಯುಸೇನೆಯ ವಾರ್ಷಿಕ ಮಹೋತ್ಸವ ನಡೆಯುತ್ತಿತ್ತು. ಮಾಜಿ ಪ್ಯಾರಾಟ್ರೂಪರ್ಸ್ ಕೂಡಾ ತಮ್ಮ ಕುಟುಂಬಸ್ಥರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಇತ್ತ ವರದಿಗಾರ ಇದರ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ. ಆದರೆ ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪದೇ ಪದೇ ಕ್ಯಾಮಾರಾದೆದುರು ಬರಲು ಪ್ರಯತ್ನಿಸುತ್ತಿದ್ದ, ಇದನ್ನು ಕಂಡ ರಿಪೋರ್ಟರ್ ಆತನಿಗೆ ಸ್ವಲ್ಪ ದೂರ ಹೋಗುವಂತೆ ಸೂಚಿಸುತ್ತಾನೆ. ಇಷ್ಟಕ್ಕೇ ಆ ವ್ಯಕ್ತಿಯ ಕೋಪ ನೆತ್ತಿಗೇರಿದ್ದು, ಲೈವ್ ಪ್ರಸಾರವಾಗುತ್ತಿದೆ ಎಂಬುವುದನ್ನೂ ಯೋಚಿಸದರೆ ವರದಿಗಾರನಿಗೆ ಭರ್ಜರಿ ಹೊಡೆತ ನೀಡಿದ್ದಾನೆ.

ಇನ್ನು ಅಚಾನಕ್ಕಾಗಿ ಆದ ದಾಳಿಯಿಂದ ರಿಪೋರ್ಟರ್ ಕೂಡಾ ಬೆಚ್ಚಿ ಬಿದ್ದಿದ್ದಾನೆ. ಏನಾಗುತ್ತಿದೆ ಎಂದು ಊಹಿಸಲೂ ಆತನಿಗೆ ಸಮಯ ನೀಡದ ವ್ಯಕ್ತಿ ಹೊಡೆತ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.ಇನ್ನು ಲೈವ್'ನಲ್ಲಿ ರಿಪೋರ್ಟರ್ ಮೇಲೆ ಇಂತಹ ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಸುದ್ದಿ ವಾಹಿನಿಯೂ ನೇರಪ್ರಸಾರವನ್ನು ಸ್ಥಗಿತಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!