ಬೆಂಗಳೂರು ಬಗ್ಗೆ ದಾರಿ ತಪ್ಪಿಸುವ ಟ್ವೀಟ್ ಮಾಡಿ ಮಂಗಳಾರತಿ ಮಾಡಿಸಿಕೊಂಡ ಬಿಜೆಪಿ ಐಟಿ ಸೆಲ್!

Published : Aug 07, 2017, 01:20 PM ISTUpdated : Apr 11, 2018, 12:52 PM IST
ಬೆಂಗಳೂರು ಬಗ್ಗೆ ದಾರಿ ತಪ್ಪಿಸುವ ಟ್ವೀಟ್ ಮಾಡಿ ಮಂಗಳಾರತಿ ಮಾಡಿಸಿಕೊಂಡ ಬಿಜೆಪಿ ಐಟಿ ಸೆಲ್!

ಸಾರಾಂಶ

ಹೊಂಡಗಳಿಂದ ತುಂಬಿಕೊಂಡಿರುವ ಮುಂಬೈ ರಸ್ತೆಯ ಫೋಟೋವೊಂದನ್ನು ಬೆಂಗಳೂರಿನ ರಸ್ತೆಯೆಂದು ಬಿಂಬಿಸಲು ಯತ್ನಿಸಿದ ಬಿಜೆಪಿ ಐಟಿ ಸೆಲ್’ಗೆ ಸೊಶಿಯಲ್ ಮೀಡಿಯಾದಲ್ಲಿ ಮಂಗಳಾರತಿ ನಡೆದಿರುವ ಘಟನೆ ನಡೆದಿದೆ.

ಬೆಂಗಳೂರು: ಹೊಂಡಗಳಿಂದ ತುಂಬಿಕೊಂಡಿರುವ ಮುಂಬೈ ರಸ್ತೆಯ ಫೋಟೋವೊಂದನ್ನು ಬೆಂಗಳೂರಿನ ರಸ್ತೆಯೆಂದು ಬಿಂಬಿಸಲು ಯತ್ನಿಸಿದ ಬಿಜೆಪಿ ಐಟಿ ಸೆಲ್’ಗೆ ಸೊಶಿಯಲ್ ಮೀಡಿಯಾದಲ್ಲಿ ಮಂಗಳಾರತಿ ನಡೆದಿರುವ ಘಟನೆ ನಡೆದಿದೆ.

ಚಂದ್ರನಲ್ಲಿ ಮನುಷ್ಯರು ನಡೆದಾಡುತ್ತಿದ್ದಾರೆ ಎಂದು ನಾಸಾ ಕಂಡುಹಿಡಿದಿದೆ. ಆದರೆ ಅದು ಬೆಂಗಳೂರು ರಸ್ತೆಯೆಂದು ಬಿಬಿಎಂಪಿ ಖಚಿತಪಡಿಸಿದೆ ಎಂದು ಮುಂಬೈ ರಸ್ತೆಯ ಫೋಟೋ ಹಾಕಿ ವ್ಯಂಗ್ಯಭರಿತವಾಗಿ ಬಿಜೆಪಿ ಐಟಿ ಸೆಲ್ ಟ್ವೀಟಿಸಿದೆ.

ಅದಕ್ಕೆ ಪ್ರತಿಕ್ರಿಯಿಸಿರುವ ಐಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಬಿಜೆಪಿಯು ಇದನ್ನು ಸಾಬೀತು ಪಡಿಸಬೇಕು ಅಥವಾ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಈ ರಸ್ತೆಯು ಬಿಜೆಪಿ ಸರ್ಕಾರವಿರುವ ಮಹಾರಾಷ್ಟ್ರದ ನವಿಮುಂಬೈಯ ಐರೋಳಿ ಸೆಕ್ಟರ್-6 ರದ್ದು ಎಂದು ಹೇಳಲಾಗಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಕೂಡಾ ಮಾಡಿದೆ.

ಬಿಜೆಪಿ ಐಟಿ ಸೆಲ್ ಈ ಕ್ರಮವು  ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೊಳಗಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

1984 ಸಿಖ್ ವಿರೋಧಿ ದಂಗೆ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಖುಲಾಸೆಗೊಳಿಸಿದ ನ್ಯಾಯಾಲಯ
ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ