
ವಾಷಿಂಗ್ಟನ್(ಜ.20): ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ಕ್ಷಣಗಣನೆ ಆರಂಭಗೊಂಡಿದ್ದು, ಸಮಾರಂಭದಲ್ಲಿ 9 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇಂದು ವಾಷಿಂಗ್ಟನ್ನಿನಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ವಿಶ್ವದ ಗಣ್ಯಾತಿಗಣ್ಯರು, ಸಹಸ್ರಾರು ಭಾರತೀಯರು ಪಾಲ್ಗೊಳ್ಳಲಿದ್ದಾರೆ. "ಅಮೆರಿಕವನ್ನು ಮತ್ತೂಮ್ಮೆ ಉನ್ನತಕ್ಕೆ ಏರಿಸೋಣ' ಎಂಬ ಉದ್ಘೋಷದಲ್ಲಿ ಸಮಾರಂಭ ಆಯೋಜನೆಗೊಂಡಿದೆ. ಈ ಹಿನ್ನೆಲೆ ವಾಷಿಂಗ್ಟನ್ನಿನ ಸುತ್ತ ಮುತ್ತ 100 ವೃತ್ತಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಅಮೆರಿಕ ಗುಪ್ತ ಚರ ಏಜೆನ್ಸಿಯ 28 ಸಾವಿರ ಸಿಬಂದಿ ಈಗಾಗಲೇ ಕರ್ತವ್ಯ ನಿರತರಾಗಿದ್ದಾರೆ.
ಆದರೆ ಟ್ರಂಪ್ ಅಧಿಕಾರ ಸ್ವೀಕರಿಸುವ ಮುನ್ನವೇ ಅಮೆರಿಕನ್ ಪ್ರೆಸ್ ಕಾರ್ಪೊರೇಶನ್ ಮತ್ತು ಶ್ವೇತ ಭವನ ಪತ್ರಕರ್ತರು ಟ್ರಂಪ್'ಗೆ ಖಡಕ್ ಎಚ್ಚರಿಕೆಯ ಬಹಿರಂಗ ಪತ್ರ ಬರೆದಿದ್ದಾರೆ. "ನಮ್ಮ ವರದಿಗಾರಿಕೆಯ ನಿಯಮಗಳನ್ನು ನಾವು ರೂಪಿಸುತ್ತೇವೆ; ನೀವಲ್ಲ; ನಮ್ಮ ಓದುಗರಿಗೆ, ವೀಕ್ಷಕರಿಗೆ ಏನನ್ನು ಕೊಡಬೇಕು ಎಂಬುದನ್ನು ನಾವೇ ತೀರ್ಮಾನಿಸುತ್ತೇವೆ; ನೀವಲ್ಲ' ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.