ಮುಂದುವರೆದ ಜಲ್ಲಿಕಟ್ಟು ಹೋರಾಟ: ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಯ್ತು ಜಲ್ಲಿಕಟ್ಟಿನ ಒಗ್ಗಟ್ಟು

Published : Jan 20, 2017, 02:53 AM ISTUpdated : Apr 11, 2018, 12:55 PM IST
ಮುಂದುವರೆದ ಜಲ್ಲಿಕಟ್ಟು ಹೋರಾಟ: ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಯ್ತು ಜಲ್ಲಿಕಟ್ಟಿನ  ಒಗ್ಗಟ್ಟು

ಸಾರಾಂಶ

ಜಲ್ಲಿಕಟ್ಟಿನ ಕಿಚ್ಚು ಇದೀಗ ಇಡಿ ತಮಿಳುನಾಡನ್ನೇ ಅವರಿಸಿದೆ. 50 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕ್ರಾಂತಿಯ ಬಿಸಿ ಪ್ರಧಾನಿ ಕಾರ್ಯಾಲಯದವರೆಗೂ ತಟ್ಟಿದೆ. ಇತ್ತ ತಮಿಳುನಾಡಿನ ಜನತೆ ಜಲ್ಲಿಕಟ್ಟು ನಿಷೇಧವನ್ನು ತೆರವುಗೊಳಿಸಲು ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿದ್ದಾರೆ.

ಚೆನ್ನೈ(ಜ.20): ಜಲ್ಲಿಕಟ್ಟಿನ ಕಿಚ್ಚು ಇದೀಗ ಇಡಿ ತಮಿಳುನಾಡನ್ನೇ ಅವರಿಸಿದೆ. 50 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕ್ರಾಂತಿಯ ಬಿಸಿ ಪ್ರಧಾನಿ ಕಾರ್ಯಾಲಯದವರೆಗೂ ತಟ್ಟಿದೆ. ಇತ್ತ ತಮಿಳುನಾಡಿನ ಜನತೆ ಜಲ್ಲಿಕಟ್ಟು ನಿಷೇಧವನ್ನು ತೆರವುಗೊಳಿಸಲು ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿದ್ದಾರೆ.

ಸಾಂಪ್ರದಾಯಿಕ ಆಚರಣೆ ಬೆಂಬಲಿಸಿ ಮುಂದುವರಿದ ಹೋರಾಟ

ಜಲ್ಲಿಕಟ್ಟು ಆಚರಣೆ ಮೇಲೆರಿರುವ ನಿಷೇಧವನ್ನು ತೆರವುಗೊಳಿಸುವಂತೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಹೋರಾಟ ನಾಲ್ಕನೇ ದಿನದತ್ತ ಮುಖಮಾಡಿದೆ. ನಿನ್ನೆ ಮರಿನಾ ಬೀಚ್ ಬಳಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಇಂದು ಕೂಡಾ ಪ್ರತಿಭಟನೆ ಮುಂದುವರಿಸಲಿದ್ದಾರೆ.

ಈ ಮಧ್ಯೆ ನಿನ್ನೆ ತಮಿಳುನಾಡು ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ, ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಜಲ್ಲಿಕಟ್ಟು ನಿಷೇಧ ತೆರವಿಗೆ ಮನವಿ ಮಾಡಿದ್ರು. ಆದ್ರೆ, ಪ್ರಧಾನಿ ಪ್ರಕರಣ ಸುಪ್ರೀಂ ಕೋರ್ಟ್​ ಅಂಗಳದಲ್ಲಿದೆ. ಕಾನೂನು ಚೌಕಟ್ಟಿನಲ್ಲೇ ಸಮಸ್ಯೆ ಪರಿಹರಿಯಬೇಕಿದೆ ಎಂದರು.

ಮತ್ತೊಂದೆಡೆ ಪಿಎಂಕೆ ಪಕ್ಷದ ಸಂಸತ್ ಸದಸ್ಯ ಅನ್ಬುಮಣಿ ರಾಮದಾಸ್ ಪ್ರಧಾನಿ ನಿವಾಸದೆದುರು ಪ್ರತಿಭಟನೆ ನಡೆಸಿದರು. ಈ ವೇಳೆ ಸಂಸದರನ್ನು ದೆಹಲಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಜಲ್ಲಿಕಟ್ಟು ಹೋರಾಟಕ್ಕೆ ಚಿತ್ರ ರಂಗದ ಬೆಂಬಲ

ಇನ್ನೂ ಜಲ್ಲಿಕಟ್ಟು ಹೋರಾಟ ನಿಮಿತ್ತ ಇಂದು ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು.. ಇನ್ನೂ ಚಿತ್ರ ರಂಗ ಕೂಡ ಇಂದು ಮತ್ತು ನಾಳೆ ಚಿತ್ರರಂಗದ ಬೆಂಬಲ ನೀಡಿದೆ. ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಕೂಡ ನಾಳೆ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಹೇಳಿದ್ದಾರೆ. ಇನ್ನೂ ಆರ್ಟ್​ ಆಫ್ ಲೀವಿಂಗ್ ನ ಪಂಡಿತ್ ರವಿಶಂಕರ್ ಗುರೂಜಿ  ಜಲ್ಲಿಕಟ್ಟು ಪರವಾಗಿ ಬ್ಯಾಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಜಲ್ಲಿಕಟ್ಟು ಹೋರಾಟ ತೀವ್ರಗೊಳ್ಳುತ್ತಿದೆ. ಇನ್ಯಾವ ಸ್ವರೂಪ ಪಡೆಯುತ್ತೆ ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ