
ನವದೆಹಲಿ: ಕೇರಳದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಕೇರಳದ ಮಹಿಳೆ ಹಾದಿಯಾ, ತಾನು ಬಲವಂತವಾಗಿ ಮತಾಂತರ ಹೊಂದಿಲ್ಲ, ತಾನು ಪತಿ ಶಫೀನ್ ಜಹಾನ್ ಜೊತೆ ಇರಬಯಸುತ್ತೇನೆ ಎಂದು ಹೇಳಿದ್ದಾರೆ.
ಮೂಲತಃ ಹಿಂದು ಧರ್ಮೀಯಳಾದ ಅಖಿಲಾ ಅಲಿಯಾಸ್ ಹಾದಿಯಾ, ‘ನಾನು ಮುಸ್ಲಿಂ. ನಾನು ಬಲವಂತದ ಮತಾಂತರ ಅಗಿಲ್ಲ. ನಾನು ನನ್ನ ಪತಿಯ ಜತೆಗೇ ಇರಬಯಸುವೆ’ ಎಂದು ಹಾದಿಯಾ ಹೇಳಿದ್ದಾರೆ.
ಮುಂದಿನ ವಿಚಾರಣೆಯನ್ನು ಜನವರಿಗೆ ನಿಗದಿಪಡಿಸಿದ ಕೋರ್ಟ್, ಹಾದಿಯಾಳನ್ನು ಕಾಲೇಜಿಗೆ ಕಳುಹಿಸುವಂತೆ ಪೋಷಕರಿಗೆ ಸೂಚಿಸಿದೆ. ಹಾಗೂ ಹಾಸ್ಟೆಲ್ ವ್ಯವಸ್ಥೆ ಮಾಡುವಂತೆ ಕಾಲೇಜಿನ ಡೀನ್’ಗೆ ಸೂಚಿಸಿದೆ. ಪ್ರಕರಣ ಮುಗಿಯುವವರೆಗೆ ಕಾಲೇಜಿನ ಡೀನ್ ಆಕೆಯ ಪೋಷಕರಾಗಿರುತ್ತಾರೆ ಎಂದು ಕೋರ್ಟ್ ಹೇಳಿದೆ.
ಹಾದಿಯಾ ಪ್ರಕರಣವು ನಿಜವಾಗಿಯೂ ಲವ್ ಜಿಹಾದ್ ಹೌದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಕೆ ತನ್ನ ಮುಂದೆ ನ.27ರಂದು ಖುದ್ದು ಹಾಜರಾಗಬೇಕೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ ಅವರ ಪೀಠ ಆದೇಶಿಸಿತ್ತು.
ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಎತ್ತಿಹಿಡಿದಿದೆ, ಅದರ ನಿರ್ಧಾರವು ಸಂತೋಷ ತಂದಿದೆ, ಎಂದು ಪತಿ ಶಫೀನ್ ಜಹಾನ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.