
ನವದೆಹಲಿ[ಜ.05]: ಭಾರತದಲ್ಲಿರುವ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿ ಸುದ್ದಿಯಾಗಿದ್ದ ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್ ಶಾ ಅವರು, ಇದೀಗ ರಾಷ್ಟ್ರದಲ್ಲಿ ನಾಗರಿಕರ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಮಾನವ ಹಕ್ಕುಗಳ ಕಣ್ಗಾವಲು ವಹಿಸುವ ಆ್ಯಮ್ನೆಸ್ಟಿಇಂಡಿಯಾ ಎನ್‌ಜಿಒ ಬಿಡುಗಡೆ ಮಾಡಿರುವ 2.13 ನಿಮಿಷದಲ್ಲಿ ನಾಸಿರುದ್ದೀನ್ ಶಾ ಅವರು, ಭಾರತದಲ್ಲಿ ಧರ್ಮದ ಹೆಸರಿನಲ್ಲಿ ಹಗೆತನವನ್ನು ಹರಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಲಾವಿದರು, ನಟರು, ಪಂಡಿತರು, ಕವಿಗಳು ಸೇರಿದಂತೆ ಇತರರ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಅಲ್ಲದೆ, ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕಾದ ಪತ್ರಕರ್ತರ ಧ್ವನಿಯನ್ನು ಸಹ ಅಡಗಿಸಲಾಗುತ್ತಿದೆ. ಅಮಾಯಕರನ್ನು ಹತ್ಯೆ ಮಾಡುತ್ತಿದೆ.
ಹಾಗಾಗಿ, ದೇಶವು ಭಯಾನಕ ಮತ್ತು ಕ್ರೌರ್ಯದ ಅಲೆಯಲ್ಲಿ ತೇಲುತ್ತಿದೆ. ಇವುಗಳ ವಿರುದ್ಧ ಧ್ವನಿಯೆತ್ತಿದವರ ಬಾಯಿ ಮುಚ್ಚಿಸಲು ಅವರ ಕಚೇರಿಗಳ ಮೇಲೆ ದಾಳಿ, ಬ್ಯಾಂಕ್ ಖಾತೆಗಳ ಜಪ್ತಿ, ಕಂಪನಿಯ ಪರವಾನಗಿ ರದ್ದು ಮಾಡಲಾಗುತ್ತಿದೆ,’ ಎಂದು ನಾಸಿರುದ್ದೀನ್ ಶಾ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ