ವಿಟಿಯು ಅನರ್ಹ ಬೋಧಕರ ನೇಮಕಾತಿಗೆ ಕುತ್ತು?

First Published Jul 13, 2018, 8:22 PM IST
Highlights

ವಿಟಿಯು ಅನರ್ಹ ಬೋಧಕರ ನೇಮಕಾತಿ ವಿಚಾರ

64 ಬೋಧಕರಿಗೆ ಕುಲಸಚಿವರಿಂದ ನೋಟಿಸ್ ಜಾರಿ

ನೋಟಿಸ್ ಜಾರಿ ಮಾಡಿದ ಕುಲಸಚಿವ ಪ್ರೊ.ಜಗನ್ನಾಥ

ನೋಟಿಸ್ ಗೆ ೧೫ ದಿನದೊಳಗೆ ಉತ್ತರಿಸುವಂತೆ ಸೂಚನೆ 
 

ಬೆಳಗಾವಿ(ಜು.13): ಆದಾಯ ಪ್ರಮಾಣ ಪತ್ರ ಮತ್ತು ಪಿಹೆಚ್ ಡಿ ಪದವಿ ಪಡೆಯದ 64 ಬೋಧಕರಿಗೆ ವಿಟಿಯು ಕುಲಸಚಿವರು ನೋಟಿಸ್ ಜಾರಿ ಮಾಡಿದ್ದಾರೆ. 64 ಬೋಧಕರಿಗೆ ನೋಟಿಸ್ ಜಾರಿಗೊಳಿಸಿದ ವಿಟಿಯು ಕುಲಸಚಿವ ಪ್ರೊ.ಜಗನ್ನಾಥ ರೆಡ್ಡಿ, ೧೫ ದಿನದೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಕುಲಪತಿ ಡಾ.ಮಹೇಶಪ್ಪ ಆಧಿಕಾರದ ಅವಧಿಯಲ್ಲಿ ಈ ಹುದ್ದೆಗಳು ಭರ್ತಿಯಾಗಿದ್ದು, ಇದರಲ್ಲಿ ಲಂಚ ಪಡೆದ ಆರೋಪ ಕೂಡ ಕೇಳಿ ಬಂದಿತ್ತು. ಕಲಬುರಗಿ, ಮೈಸೂರು, ಮುದ್ದೇನಹಳ್ಳಿಯ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಈ ಬೋಧಕರನ್ನು ನೇಮಿಸಲಾಗಿತ್ತು.

ಈ ಅಕ್ರಮದ ಬಗ್ಗೆ 2017 ರಲ್ಲಿ ಸರ್ಕಾರ ನ್ಯಾ .ಕೇಶವನಾರಾಯಣ ಸಮಿತಿ ರಚಿಸಿತ್ತು. ಅನರ್ಹತೆ ಹೊಂದಿರುವವರನ್ನು ನೇಮಕ ಮಾಡಿಕೊಂಡಿರುವುದಾಗಿ ಈ ಸಮಿತಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿತ್ತು.

ಇದೀಗ ಬೋಧಕರ ಪ್ರೊಬೆಷನರಿ ಅವಧಿ ಮುಕ್ತಾಯಗೊಂಡಿದ್ದು, ಬೋಧಕರ ಆರ್ಹತೆ ಪರಿಶೀಲನೆಗೆ ವಿಟಿಯು‌ ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಈ 64 ಬೋಧಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

click me!