ಸಂಚಾರಿ ಪೊಲೀಸರ ಪ್ರಾಮಾಣಿಕತೆ ಭಲೇ ಭಲೇ!

Published : Jul 13, 2018, 07:50 PM IST
ಸಂಚಾರಿ ಪೊಲೀಸರ ಪ್ರಾಮಾಣಿಕತೆ ಭಲೇ ಭಲೇ!

ಸಾರಾಂಶ

ರಸ್ತೆಯಲ್ಲಿ ಸಿಕ್ಕ ಮೊಬೈಲ್ ಹಿಂದಿರುಗಿಸಿದ ಟ್ರಾಫಿಕ್ ಪೊಲೀಸ್ ಚಾಮರಾಜಪೇಟೆ ಬಳಿಯ ಮಕ್ಕಳ ಕೂಟದ ಬಳಿ ಘಟನೆ ಮಾಲೀಕನಿಗೆ ಕರೆ ಮಾಡಿ ಮೊಬೈಲ್ ಹಿಂದಿರುಗಿಸಿದ ಪೊಲೀಸರು ಪೊಲೀಸರ ಪ್ರಾಮಾಣಿಕತೆಗೆ ಹಿರಿಯ ಅಧಿಕಾರಿಗಳ ಶ್ಲಾಘನೆ   

ಬೆಂಗಳೂರು(ಜು.13): ರಸ್ತೆಯಲ್ಲಿ ಬಿದ್ದಿದ್ದ ಮೊಬೈಲ್ ಫೋನ್ ನ್ನು ವಾರಸುದಾರರಿಗೆ ಹಿಂತಿರುಗಿಸಿದ ಸಂಚಾರಿ ಪೊಲೀಸರ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ನಗರದ ಚಾಮರಾಜಪೇಟೆ ಸಮೀಪದ ಮಕ್ಕಳ ಕೂಟದ ಬಳಿ, ವಿವಿ ಪುರಂ ಸಂಚಾರಿ ಪೊಲೀಸರಾದ ಎಎಸ್ ಐ ಗೋಪಾಲಯ್ಯ ಮತ್ತು ಪೇದೆ ನಾಗರಾಜ್ ಕರ್ತವ್ಯದಲ್ಲಿದ್ದರು. ಈ ವೇಳೆ ರಸ್ತೆಯಲ್ಲಿ ಮೊಬೈಲ್ ವೊಂದು ಬಿದ್ದಿದ್ದು ಅವರಿಗೆ ಕಾಣಿಸಿದೆ.

ಕೂಡಲೇ ಮೊಬೈಲ್ ವಶಕ್ಕೆ ಪಡೆದು ಮಾಲೀಕನನ್ನು ಸಂಪರ್ಕಿಸಿ ಮೊಬೈಲ್ ನ್ನು ಹಿಂದಿರುಗಿಸಿದ್ದಾರೆ. ವಿವಿ ಪುರಂ ಪೊಲೀಸರ ಕರ್ತವ್ಯ ನಿಷ್ಠೆಗೆ ಹಿರಿಯ ಅಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದು ವಾರಕ್ಕೆ 16% ಏರಿಕೆ ಕಂಡ ಜಾಗತಿಕ ಕಚ್ಚಾತೈಲ ಬೆಲೆ, ಭಾರತ ಸೇರಿದಂತೆ ಇಡೀ ವಿಶ್ವಕ್ಕೆ ಹಣದುಬ್ಬರದ ಭೀತಿ!
ಕುತೂಹಲಕ್ಕೆ ಮಾಡಿಸಿದ DNA ಪರೀಕ್ಷೆ ಬದುಕಿಗೆ ತಂತು ಆಘಾತ.. ಇದು 38 ವರ್ಷಗಳ ಹಿಂದಿನ ಅದಲು-ಬದಲು ಕಥೆ