
ವಿಜಯಪುರ[ಜು.13] ನಾನು ಹೇಗೆ ಇದ್ರು "ಪವರ್ ಪುಲ್" ಎಂದು ಮಾಜಿ ನೀರಾವರಿ ಸಚಿವ ಹಾಲಿ ಶಾಸಕ ಎಂ ಬಿ ಪಾಟೀಲ್ ಹೇಳಿದ್ದಾರೆ.
ವಿಜಯಪುರ ತಾಲ್ಲೂಕಿನ ಸೋ ಮದೇವರಹಟ್ಟಿ ಗ್ರಾಮದ ದು ಗ್ರಾ ದೇವಿ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ ಬಿ ಪಾಟೀಲ್ , ನಾನೇ ಪವರ್ ಪುಲ್ , ನಾನು ಸಚಿವನಿದ್ದಾಗಲೂ ನಾನೇ ಪವರ್ ಫುಲ್ ಆಗಿದ್ದವನು ಎಂದು ಹೇಳಿದರು.
ಕಳೆದ ವರ್ಷದ ಇದೇ ಜಾತ್ರೆಯಲ್ಲಿ ಸಿಎಂ ಆಗ್ತೆನೆ ಎಂದು ಹೇಳಿದ್ರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೀನ್ನು 54 ವರ್ಷ. ಇನ್ನು ಅದಕ್ಕೆ ಟೈ ಇದೆ. ಆ ಟೈಂ ಬರ್ತದೆ ಎಂದು ಹೇಳುವ ಮೂಲಕ ಸಿಎಂ ರೇಸ್ ನಲ್ಲಿ ಮುಂದೆಯೂ ನಾನಿದ್ದೇನೆ ಎಂದು ಸ್ಪಷ್ಟಪಡಿಸಿದರು.ಇನ್ನು ಸಚಿವ ಸ್ಥಾನ ಸಿಗುವ ಬಗ್ಗೆ ಸುಳಿವು ಬಿಚ್ಚಿಟ್ಟ ಎಂಬಿಪಿ, ದುರ್ಗಾದೇವಿ ಆಶೀರ್ವಾದ ನನ್ನ ಮೇಲಿದೆ. ದೇವಿ ಸಧ್ಯ ನನ್ನ ಪರೀಕ್ಷೆ ನಡೆಸಿದ್ದಾಳೆ. ಪರೀಕ್ಷೆಯಲ್ಲಿ ದೇವಿ ನನ್ನನ್ನು ಪಾರು ಮಾಡಿಸುತ್ತಾಳೆಂಬ ವಿಶ್ವಾಸವಿದೆ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷೆಯನ್ನು ಪರೋಕ್ಷವಾಗಿ ಎಂ ಬಿ ಪಾಟೀಲ್ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.