ವಿಟಿಯು: ಕ್ರಿಟಿಕಲ್ ಇಯರ್ ಬ್ಯಾಕ್ ಪದ್ಧತಿಯಲ್ಲಿ ಬದಲಾವಣೆ

By Suvarna Web DeskFirst Published Sep 13, 2017, 11:36 AM IST
Highlights

ಅವೈಜ್ಞಾನಿಕ ಪರೀಕ್ಷಾ ಪದ್ಧತಿಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಎಚ್ಚೆತ್ತುಕೊಂಡಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕೆಲವು ನಿಯಮಗಳನ್ನು ಬದಲಾವಣೆ ಮಾಡಿದ್ದು, 5 ಮತ್ತು 6ನೇ ಸೆಮಿಸ್ಟರ್ ತರಗತಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.

ಬೆಂಗಳೂರು: ಅವೈಜ್ಞಾನಿಕ ಪರೀಕ್ಷಾ ಪದ್ಧತಿಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಎಚ್ಚೆತ್ತುಕೊಂಡಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕೆಲವು ನಿಯಮಗಳನ್ನು ಬದಲಾವಣೆ ಮಾಡಿದ್ದು, 5 ಮತ್ತು 6ನೇ ಸೆಮಿಸ್ಟರ್ ತರಗತಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.

ಬೆಳಗಾವಿಯಲ್ಲಿರುವ ವಿಟಿಯು ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯ ನಿರ್ವಾಹಕ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇಯರ್ ಬ್ಯಾಕ್ ಮತ್ತು ಕ್ರಿಟಿಕಲ್ ಇಯರ್ ಬ್ಯಾಕ್ ತಾತ್ಕಾಲಿಕ ಪರಿಹಾರ ಕಲ್ಪಿಸಿದೆ.

ಸದ್ಯ ಈಗಿರುವ ನಿಯಮಗಳ ಪ್ರಕಾರ 5ನೇ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಾದರೆ, 1ಮತ್ತು 2ನೇ ಸೆಮಿಸ್ಟರ್’ನಲ್ಲಿ ಯಾವುದೇ ವಿಷಯದಲ್ಲಿ ಅನುತ್ತೀರ್ಣರಾಗಿರಬಾರದು. ಕೇವಲ ಒಂದೇ ಒಂದು ವಿಷಯಗಳನ್ನು ಉಳಿಸಿಕೊಂಡಿದ್ದರೂ ಮುಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯಲು ಅನರ್ಹರಾಗಿರುತ್ತಾರೆ ಎಂಬ ನಿಯಮವಿದೆ.

ಇದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಎಚ್ಚೆತ್ತುಕೊಂಡಿರುವ ವಿವಿ ಆಡಳಿತ ಮಂಡಳಿಯು 5 ಮತ್ತು 6ನೇ ಸೆಮಿಸ್ಟರ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಇದರ ಜತೆಗೆ ವಾರಾಂತ್ಯ ಪರೀಕ್ಷೆಗಳನ್ನು ನಡೆಸಲು ಸಹ ತೀರ್ಮಾನಿಸಿದೆ. ಇಯರ್ ಬ್ಯಾಕ್ (ಹಿಂದಿನ ವರ್ಷ 4ಕ್ಕಿಂತ ಹೆಚ್ಚು ವಿಷಯಗಳಲ್ಲಿ ಫೇಲಾಗಿದ್ದರೆ ಮುಂದಿನ ವರ್ಷಕ್ಕೆ ಪ್ರವೇಶಕ್ಕೆ ಅನರ್ಹತೆ) ಮತ್ತು ಕ್ರಿಟಿಕಲ್ ಇಯರ್‌ಬ್ಯಾಕ್ (3 ಮತ್ತು 4ನೇ ವರ್ಷದ ಪ್ರವೇಶಕ್ಕೆ ಕ್ರಮವಾಗಿ ಮೊದಲ ಮತ್ತು 2ನೇ ವರ್ಷದ ಎಲ್ಲ

ವಿಷಯಗಳೂ ಉತ್ತೀರ್ಣವಾಗಿರಬೇಕು) ಎಂಬ ನಿಯಮವಿತ್ತು.

click me!