ಮಂಗನ ಸೆಲ್ಫಿ ಹಕ್ಕು ಯಾರಿಗೆ? ಕೊನೆಗೂ ವಿವಾದ ಸುಖಾಂತ್ಯ!

By Suvarna Web DeskFirst Published Sep 13, 2017, 10:52 AM IST
Highlights

6 ವರ್ಷಗಳ ಹಿಂದೆ ಬ್ರಿಟನ್‌ನ ಫೋಟೋಗ್ರಾರ್ ಡೇವಿಡ್ ಸ್ಲೇಟರ್ ಇಂಡೋನೇಷ್ಯಾಕ್ಕೆ ತೆರಳಿದ್ದರು. ಈ ವೇಳೆ, ನರುಟೋ ಎಂಬ ಮಂಗ ಸ್ಲೇಟರ್ ಕ್ಯಾಮೆರಾದಲ್ಲಿ ತನ್ನದೇ ಸೆಲ್ಫಿ ತೆಗೆದುಕೊಂಡಿತ್ತು. ಆ ಸೆಲ್ಫಿ ಭಾರೀ ಫೇಮಸ್ ಆಗಿತ್ತು. ಆದರೆ ಪ್ರಕರಣ ಇಷ್ಟಕ್ಕೆ ನಿಲ್ಲಲಿಲ್ಲ. ಮಂಗ ತೆಗೆದ ಸೆಲ್ಫಿಯ ಹಕ್ಕುಸ್ವಾಮ್ಯ ಯಾರಿಗೆ ಸೇರಬೇಕು ಎಂಬ ಹೊಸ ವಿವಾದ ಹುಟ್ಟಿಕೊಂಡಿತು.

ಸ್ಯಾನ್‌ ಫ್ರಾನ್ಸಿಸ್ಕೋ(ಸೆ.13): 6 ವರ್ಷಗಳ ಹಿಂದೆ ಬ್ರಿಟನ್‌ನ ಫೋಟೋಗ್ರಾರ್ ಡೇವಿಡ್ ಸ್ಲೇಟರ್ ಇಂಡೋನೇಷ್ಯಾಕ್ಕೆ ತೆರಳಿದ್ದರು. ಈ ವೇಳೆ, ನರುಟೋ ಎಂಬ ಮಂಗ ಸ್ಲೇಟರ್ ಕ್ಯಾಮೆರಾದಲ್ಲಿ ತನ್ನದೇ ಸೆಲ್ಫಿ ತೆಗೆದುಕೊಂಡಿತ್ತು. ಆ ಸೆಲ್ಫಿ ಭಾರೀ ಫೇಮಸ್ ಆಗಿತ್ತು. ಆದರೆ ಪ್ರಕರಣ ಇಷ್ಟಕ್ಕೆ ನಿಲ್ಲಲಿಲ್ಲ. ಮಂಗ ತೆಗೆದ ಸೆಲ್ಫಿಯ ಹಕ್ಕುಸ್ವಾಮ್ಯ ಯಾರಿಗೆ ಸೇರಬೇಕು ಎಂಬ ಹೊಸ ವಿವಾದ ಹುಟ್ಟಿಕೊಂಡಿತು.

ಮಂಗ ಸೆಲ್ಫಿ ತೆಗೆದುಕೊಂಡಿರುವ ಕಾರಣ, ಆ ಫೋಟೋದಿಂದ ಬರುವ ಪೂರ್ತಿ ಹಣವನ್ನು ನರುಟೋ ಸೇರಿದಂತೆ ಅದರ ಸಂತತಿ ನೋಡಿಕೊಳ್ಳಲು ತನಗೆ ನೀಡಬೇಕು ಎಂದು ಪ್ರಾಣಿದಯಾ ಸಂಘಟನೆಯಾದ ಪೇಟಾ ವಾದಿಸಿತ್ತು. ಅದರೆ ಮಂಗ ನನ್ನ ಕ್ಯಾಮೆರಾದಿಂದ ಸೆಲ್ಫಿ ತೆಗೆದುಕೊಂಡ ಕಾರಣ, ಅದರ ಪೂರ್ತಿ ಹಕ್ಕು ತನಗೆ ಸೇರಿದ್ದು ಎಂದು ಫೋಟೋಗ್ರಾಫರ್ ಡೇವಿಡ್ ಸ್ಲೇಟರ್ ವಾದಿಸಿದ್ದರು.

ಕೊನೆಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ತೀರ್ಪು ಹೊರಬಿದ್ದಿದ್ದು, ಫೋಟೋದಿಂದ ಸಿಗುವ ಆದಾಯದ ಶೇ.25ರಷ್ಟನ್ನು ಮಕ್ಯಾಕ್ ಮಂಗಗಳ ರಕ್ಷಣೆಗೆ ನೀಡಬೇಕೆಂದು ಡೇವಿಡ್‌'ಗೆ ಕೋರ್ಟ್ ಸೂಚಿಸಿದೆ.

 

click me!