ತಿರುಮಲ ಬೈಪಾಸ್‌ನಲ್ಲಿ ಉಗ್ರರ ಎನ್‌ಕೌಂಟರ್: ಬೆಚ್ಚಿ ಬೀಳಿಸುವ ವಿಡಿಯೋ!

Published : Jan 22, 2019, 03:53 PM ISTUpdated : Jan 22, 2019, 05:16 PM IST
ತಿರುಮಲ ಬೈಪಾಸ್‌ನಲ್ಲಿ ಉಗ್ರರ ಎನ್‌ಕೌಂಟರ್: ಬೆಚ್ಚಿ ಬೀಳಿಸುವ ವಿಡಿಯೋ!

ಸಾರಾಂಶ

ಇಲ್ಲಿನ ಬೈಪಾಸ್ ರಸ್ತೆಯಲ್ಲಿ 4 ಜಿಹಾದಿ ಉಗ್ರವಾದಿಗಳು ಕಾಣಿಸಿಕೊಂಡ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  

ತಿರುಮಲ(ಜ.22): ಇಲ್ಲಿನ ಬೈಪಾಸ್ ರಸ್ತೆಯಲ್ಲಿ 4 ಜಿಹಾದಿ ಉಗ್ರವಾದಿಗಳು ಕಾಣಿಸಿಕೊಂಡಿದ್ದು, ಪೊಲೀಸ್ ಎನ್‌ಕೌಂಟರ್‌ನಲ್ಲಿ ಓರ್ವ ಸತ್ತು ಮೂವರು ಬಂಧಿತರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉಗ್ರವಾದಿಗಳ ಕಾರು ಬೈಪಾಸ್ ರಸ್ತೆಗೆ ಬರುತ್ತಿದ್ದಂತೇ ಕಾರನ್ನು ಸುತ್ತುವರೆದ ಸೇನಾಪಡೆ ಅವರ ಮೇಲೆ ಗುಂಡಿನ ದಾಳಿ ಮಾಡಿದೆ. ಕೂಡಲೇ ಕಾರಿನಿಂದ ಇಳಿದು ಓಡತೊಡಗಿದ್ದ ಉಗ್ರವಾದಿಗಳನ್ನು ಬೆನ್ನೆತ್ತಿ ಓರ್ವನನ್ನು ಕೊಲ್ಲಲಾಗಿದೆ.

"

ಇದೇ ವೇಳೆ ಮೂವರು ಉಗ್ರವಾದಿಗಳನ್ನು ವಶಕ್ಕೆ ಪಡೆದ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಕುರಿತು ಗೊಂದಲಗಳಿವೆ. ಮೂಲಗಳ ಪ್ರಕಾರ ಭಯೋತ್ಪಾದಕ ದಾಳಿಗಳಾದಾಗ ಸೇನಾ ಕಾರ್ಯಾಚರಣೆ ಹೇಗಿರುತ್ತದೆ ಎಂಬುದರ ಕುರಿತು ಸೈನಿಕರು ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಸಿದ ವಿಡಿಯೋ ಇದಾಗಿದೆ ಎಂಬುದು ಸ್ಪಷ್ಟವಾಗಿದೆ.

 

ತೆಲಂಗಾಣದ ಸೈಬರಾಬಾದ್ ಪೊಲೀಸ್ ಇಲಾಖೆಯ ಆಕ್ಟೋಪಸ್ ತಂಡ ವಾರಂಗಲ್ ನಲ್ಲಿ ಈ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದ್ದು, ಇದನ್ನು ತಪ್ಪಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡಲಾಗುತ್ತಿದೆ.

ಆದರೆ ತಿರುಮಲದಲ್ಲಿ ಭಯೋತ್ಪಾದಕರ ಎನ್‌ಕೌಂಟರ್ ಎಂದೇ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾನು ಸಾಲರಾಮಯ್ಯ ಅಲ್ಲ, ನಾನು ಅನ್ನದ ರಾಮಯ್ಯ; ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
Punjab Grenade Attack: ಪಂಜಾಬ್ ಬಿಜೆಪಿ ಕಚೇರಿ ಮೇಲೆ ಗ್ರೆನೇಡ್ ಅಟ್ಯಾಕ್! ದಾಳಿಯ ಹೊಣೆ ಹೊತ್ತ ನಿಷೇಧಿತ ಬಬ್ಬರ್‌ ಖಾಲ್ಸಾ