ಬಿಜೆಪಿ ಮುಖಂಡನ ಮನೆಗೆ ಕಾಂಗ್ರೆಸ್ ಸಂಸದ : ಇದು ಮಿಡ್ ನೈಟ್ ಸೀಕ್ರೆಟ್?

By Web DeskFirst Published Jan 22, 2019, 3:50 PM IST
Highlights

ಬಿಜೆಪಿ ಮಾಜಿ ಸಿಎಂ ಮನೆಗೆ ಕಾಂಗ್ರೆಸ್ ಮುಖಂಡರೋರ್ವರು ತೆರಳಿದ್ದು, ರಾಜಕೀಯದಲ್ಲಿ ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ. ಲೋಕಸಭಾ ಚುನಾವಣಾ ಬೆನ್ನಲ್ಲೇ ಈ ರೀತಿಯ ಬೆಳವಣಿಗೆ ಆತಂಕಕ್ಕೂ ಎಡೆಮಾಡಿಕೊಟ್ಟಿದೆ. 

ಭೋಪಾಲ್ :  ಕರ್ನಾಟಕದಲ್ಲಿ ಆಪರೇಷನ್ ಕಮಲದ ಕಸರತ್ತು ಜೋರಾಗಿ ನಡೆದು ಕಾಂಗ್ರೆಸ್ ಮುಖಂಡರು ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಇರಿಸಿ ರೆಸಾರ್ಟ್ ಪಾಲಿಟಿಕ್ಸ್ ಮಾಡಿದ ಬೆನ್ನಲ್ಲೇ ಅತ್ತ ಮಧ್ಯ ಪ್ರದೇಶ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. 

 ಮಧ್ಯ ಪ್ರದೇಶದ ಕಾಂಗ್ರೆಸ್ ಮುಖಂಡರೋರ್ವರು ಬಿಜೆಪಿ ಮುಖಂಡರ ಮನೆಗೆ ರಾತ್ರೋ ರಾತ್ರಿ ಭೇಟಿ ನೀಡಿದ್ದು, ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. 

ಇದೀಗ ಮಾಜಿ ಸಿಎಂ ಶಿವರಾಜ್ ಸಿಂಗ್ ನಿವಾಸಕ್ಕೆ ಜ.21ರ ಸೋಮವಾರ ರಾತ್ರಿ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಭೇಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.   ಒಟ್ಟು 40 ನಿಮಿಷಗಳ ಕಾಲ ಮುಖಂಡರು ಚರ್ಚೆ ನಡೆಸಿದ್ದು, ಈ ಬಗ್ಗೆ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.   

ಪರೋಕ್ಷವಾಗಿ ಕೊಪ್ಪಳ ಲೋಕಸಭಾ ಅಭ್ಯರ್ಥಿ ಘೋಷಿಸಿದ ಸಿದ್ದರಾಮಯ್ಯ

ಇತ್ತೀಚೆಗಷ್ಟೇ  ಮಧ್ಯ ಪ್ರದೇಶದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರ ಗದ್ದುಗೆಗೆ ಏರಿ, ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಅಧಿಕಾರ ವಹಿಸಿಕೊಂಡಿದ್ದರು.  

ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಬೆಳವಣಿಗೆಯಿಂದ ಕಾಂಗ್ರೆಸ್ ನಾಯಕರಲ್ಲಿ ಕೊಂಚ ಆತಂಕ ಮನೆ ಮಾಡಿದಂತಾಗಿದೆ. 

click me!