![[ವೈರಲ್ ಚೆಕ್] ಗೃಹ ಸಚಿವ ರಾಜನಾಥ್ ಸಿಂಗ್ ಕಾಲು ಮುಟ್ಟಿ ನಮಸ್ಕರಿಸಿದ ಡಿಜಿಪಿ!](https://static.asianetnews.com/images/w-412,h-232,imgid-86945cf0-da52-4bb7-bd19-f7b92d421277,imgname-image.jpg)
ಗುಜರಾತಿನ ಪೊಲೀಸ್ ಮಹಾನಿರ್ದೇಶಕರೊಬ್ಬರು, ಪೊಲೀಸ್ ಸಮವಸ್ತ್ರದಲ್ಲಿಯೇ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಅವರ ಕಾಲನ್ನು ಮುಟ್ಟಿ ನಮಸ್ಕರಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಫೋಟೋದಲ್ಲಿ ಪೊಲೀಸ್ ಮಹಾನಿರ್ದೇಶಕರೊಬ್ಬರು ನಮಸ್ಕರಿಸುವಾಗ, ಗೃಹಸಚಿವರು ಕಾಲಿನ ಮೇಲೆ ಕಾಲು ಹಾಕಿ ಸೋಫಾ ಮೇಲೆ ದರ್ಪದಿಂದ ಕುಳಿತಿರುತ್ತಾರೆ. ಅಲ್ಲದೆ ಆ ಚಿತ್ರದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಹಾಗೂ ಇತರರೂ ಇದ್ದಾರೆ. ಈ ವೈರಲ್ ಚಿತ್ರಕಂಡು ಗೃಹಸಚಿವರೊಬ್ಬರು, ಡಿಜಿಪಿಯನ್ನು ಹೀಗೆ ನಡೆಸಿಕೊಂಡರೇ, ಇದು ನಾಚಿಕೆಗೇಡಿನ ಸಂಗತಿ ಎಂಬೆಲ್ಲಾ ಟೀಕೆಗಳು ಕೇಳಿಬರುತ್ತಿವೆ.
ಹಾಗಾದರೆ ನಿಜವಾಗಿಯೂ ಗೃಹಸಚಿವರು ಹೀಗೆ ಮಾಡಿದ್ದರೇ? ಎಂದು ತನಿಖೆ ನಡೆಸಿದಾಗ ಬಯಲಾದ ಸತ್ಯವೇ ಬೇರೆ. ಏಕೆಂದರೆ ಅಸಲಿಗೆ ಇದು ‘ಕ್ಯಾ ಯಹೀ ಸಚ್ ಹೈ’ ಸಿನಿಮಾವೊಂದರ ದೃಶ್ಯ!
ಈ ಚಿತ್ರದಲ್ಲಿರುವುದು ಗೃಹ ಸಚಿವ ರಾಜನಾಥ್ ಸಿಂಗ್ ಅಲ್ಲ. ‘ಕ್ಯಾ ಯಹೀ ಸಚ್ ಹೈ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ರಾಜಕಾರಣಿಯ ಕಾಲಿಗೆ ಬೀಳುವ ದೃಶ್ಯವಿದೆ. ಆ ದೃಶ್ಯವಿರುವ ಚಿತ್ರಕ್ಕೆ ರಾಜನಾಥ್‌ಸಿಂಗ್ ಅವರ ಮುಖವನ್ನು ಫೋಟೋ ಶಾಪ್ ಮೂಲಕ ಜೋಡಿಸಲಾಗಿದೆ.
ಹೀಗಾಗಿ ಗೃಹ ಸಚಿವ ರಾಜನಾಥ್‌ಸಿಂಗ್ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎನ್ನಲಾದ ಈ ಫೋಟೋ ಸುಳ್ಳು. ಇದೊಂದು ಫೋಟೋಶಾಪ್ ಮೂಲಕ ಸೃಷ್ಟಿಸಿದ ನಕಲಿ ಫೋಟೋ ಎಂಬುದು ಸಾಬೀತಾದಂತಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.