ವಿಮ್ಸ್ ಆಸ್ಪತ್ರೆಯಲ್ಲಿ ಮುಂದುವರೆದ ಗೊಂದಲ: ಆಸ್ಪತ್ರೆಯ ದಿನಗೂಲಿ ಕಾರ್ಮಿಕರಿಗೆ ಸಿಗುತ್ತಿಲ್ಲ ಸಂಬಳ

By Suvarna Web DeskFirst Published Feb 21, 2017, 2:51 AM IST
Highlights

ಬಳ್ಳಾರಿ ವಿಮ್ಸ್ ಆಸ್ಪತ್ರೆ ಒಂದಲ್ಲಾ ಒಂದು ಕಾರಣಗಳಿಂದ ಸುದ್ದಿಯಲ್ಲಿರುತ್ತೆ. ಈ ಬಾರಿ ಸುದ್ದಿಯಾಗಿರುವುದು, ದಿನಗೂಲಿ ನೌಕರರಿಗೆ ಸಮರ್ಪಕವಾಗಿ ಸಂಬಳ ನೀಡದ ವಿಚಾರವಾಗಿ. ಕಳೆದ ಮೂರು ತಿಂಗಳಿನಿಂದ ಸಂಬಳ ನೀಡದೇ 569 ಸ್ವಚ್ಚತಾ ಸಿಬ್ಬಂದಿ ಬೇಸತ್ತಿದ್ದು,  ಕೆಲಸ ಬಿಟ್ಟು ದಿಢೀರ್ ಪ್ರತಿಭಟನೆಗೆ ಇಳಿದಿದ್ದಾರೆ.

ಬಳ್ಳಾರಿ(ಫೆ.21): ಬಳ್ಳಾರಿ ವಿಮ್ಸ್ ಆಸ್ಪತ್ರೆ ಒಂದಲ್ಲಾ ಒಂದು ಕಾರಣಗಳಿಂದ ಸುದ್ದಿಯಲ್ಲಿರುತ್ತೆ. ಈ ಬಾರಿ ಸುದ್ದಿಯಾಗಿರುವುದು, ದಿನಗೂಲಿ ನೌಕರರಿಗೆ ಸಮರ್ಪಕವಾಗಿ ಸಂಬಳ ನೀಡದ ವಿಚಾರವಾಗಿ. ಕಳೆದ ಮೂರು ತಿಂಗಳಿನಿಂದ ಸಂಬಳ ನೀಡದೇ 569 ಸ್ವಚ್ಚತಾ ಸಿಬ್ಬಂದಿ ಬೇಸತ್ತಿದ್ದು,  ಕೆಲಸ ಬಿಟ್ಟು ದಿಢೀರ್ ಪ್ರತಿಭಟನೆಗೆ ಇಳಿದಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 569 ಸ್ವಚ್ಚತಾ ಕೂಲಿ ಕಾರ್ಮಿಕರು ಮೂರು ವೇತನವಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಕಾರಣಕ್ಕೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ದಿಢೀರ್ ಪ್ರತಿಭಟನೆಗಿಳಿದಿದ್ದಾರೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಮುಂಭಾಗ ದಿನಗೂಲಿ ಕಾರ್ಮಿಕರು ತಮ್ಮ ಸ್ವಚ್ಚತಾ ಕೆಲಸವನ್ನು ಮಾಡದೇ ಪ್ರತಿಭಟನಾ ಧರಣಿಯಲ್ಲಿ ಭಾಗಿಯಾಗಿ ವೇತನ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡುತ್ತಿರುವ ದಿನಗೂಲಿ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವುದರಿಂದ, ನೇರವಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸಂಬಂಧವಿಲ್ಲ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಗುತ್ತಿಗೆದಾರ ಕಳೆದ ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಕೇಳಿದರೂ ವಿಮ್ಸ್ ಆಸ್ಪತ್ರೆಯಿಂದ ವೇತನ ಬಂದಿಲ್ಲ. ಬಂದ ಕೂಡಲೇ ನೀಡಲಾಗುವುದು ಎನ್ನುವ ಸಮಜಾಯಿಸಿ ನೀಡುತ್ತಿದ್ದಾರಂತೆ. ಈ ಬಗ್ಗೆ ವಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಕೇಳಿದರೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ.

ವಿಮ್ಸ್ ಆಸ್ಪತ್ರೆಯಲ್ಲಿ ವೇತನ ಸಮಸ್ಯೆ ಇದು ಮೊದಲೇನಲ್ಲ. ಇದೀಗ, ದಿನಗೂಲಿಯನ್ನೇ ನಂಬಿಕೊಂಡಿದ್ದ ಕಾರ್ಮಿಕರಿಗೆ ವೇತನ ಸಿಗದೆ ಪರದಾಡುವ ಸ್ಥಿತಿ ಎದುರಾಗಿದೆ. 3 ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ ನೌಕರರು- ಹಸಿದ ಹೊಟ್ಟೆ ತಣಿಸಲು ಮುಂದಾಗುತ್ತಿಲ್ಲ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ- ಇನ್ನಾದ್ರೂ ನಿವಾರಣೆಯಾಗಲಿದೆಯಾ ಗೊಂದಲ

 

click me!