
ಇಂಗ್ಲೆಂಡ್(ಫೆ.21): ನಾವು ಯಾರನ್ನು ಪ್ರೀತಿಸುತ್ತೇವೋ, ಅವರ ಧ್ವನಿ ಕೆಲ ಕ್ಷಣ ಕೇಳದಿದ್ದರೆ ಏನೋ ಒಂಥರಾ ಕಸಿವಿಸಿಯಾಗುತ್ತದೆ. ಹೀಗಿರುವಾಗ ಪ್ರೀತಿಸಿ ಮದುವೆಯಾದ ದಂಪತಿಯೊಂದು ಒಂದೇ ಮನೆಯಲ್ಲಿದ್ದ 12 ವರ್ಷ ಪರಸ್ಪರ ಮಾತನಾಡದೇ ಕಳೆದಿದ್ದಾರೆ. ಬರೋಬ್ಬರಿ 12 ವರ್ಷಗಳ ಬಳಿಕ ಗಂಡ ತನ್ನ ಹೆಂಡತಿಯೊಡನೆ ಮಾತನಾಡಿದ ಘಟನೆ ಇಂಗ್ಲೆಂಡ್'ನಲ್ಲಿ ನಡೆದಿದೆ. ಅಷ್ಟಕ್ಕೂ ಒಬ್ಬರನ್ನೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಇವರು ಇಷ್ಟು ವರ್ಷ ಮಾತನಾಡದೇ ಇರಲು ಕಾರಣವೇನು ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ
ಡೈಲಿ ಮೇಲ್ ಇಂತಹುದೊಂದು ಘಟನೆಯನ್ನು ವರದಿ ಮಾಡಿದ್ದು, ನೀಲ್ ಹಾಗೂ ಆತನ ಪತ್ನಿ ಹೆಲೆನ್ ಬಧಿರ್ ಇಬ್ಬರೂ ಮಾತೇನೋ ಆಡುತ್ತಾರೆ ಆದರೆ ಪರಸ್ಪರ ಆಡಿದ ಮಾತನ್ನು ಕೇಳುತ್ತಿರಲಿಲ್ಲವಂತೆ. ಇದೇ ಕಾರಣದಿಂದ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಮಾತನಾಡುತ್ತಿರಲಿಲ್ಲ. ಇಬ್ಬರೂ ತಮ್ಮ ಭಾವನೆಗಳನ್ನು ಕೇವಲ ಸನ್ನೆಗಳ ಮೂಲಕ ಪರಸ್ಪರ ತಿಳಿಸುತ್ತಿದ್ದರು.
ಹಲವಾರು ವರ್ಷಗಳಿಂದ ಇಬ್ಬರೂ ತನ್ನ ಪಾರ್ಟ್ನರ್ ಮಾತುಗಳನ್ನು ಕೇಳಬೇಕೆಂಬ ಹೆಬ್ಬಯಕೆ ಹೊಂದಿದ್ದರು. ಇದಕ್ಕಾಗಿ ಇಬ್ಬರೂ ಚಿಕಿತ್ಸೆ ಪಡೆಯಲು USAIS ತಲುಪಿದ್ದು, ಇಲ್ಲಿನ ವೈದ್ಯರೂ ಈ ದಂಪತಿಯ ಆಸೆ ಈಡೇರಿಸಲು ಸಹಾಯ ಮಾಡಿದ್ದಾರೆ. ಕೊಹ್ಲಿಯಾರ್ ಇಂಪ್ಲಾಂಟ್ ಚಿಕಿತ್ಸೆ ನೀಡುವ ಮೂಲಕ ಇಬ್ಬರಿಗೂ ತಮ್ಮ ಸಂಗಾತಿ ಆಡುವ ಮಾತುಗಳನ್ನು ಕೇಳುವಂತೆ ಮಾಡಿದ್ದಾರೆ.
12 ವರ್ಷಗಳ ಬಳಿಕ ಮೊದಲ ಬಾರಿ ತಮ್ಮ ಸಂಗಾತಿಯ ಮಾತು ಕೇಳಿದ ಇಬ್ಬರೂ ಭಾವುಕರಾಗಿದ್ದರು. ಅಷ್ಟರಲ್ಲೇ ಪತಿ ನೀಲ್ ಮಾತ್ರ ಹಾಸ್ಯಾಸ್ಪದ ರೀತಿಯಲ್ಲಿ 'ಪತ್ನಿ ಹೆಲೆನ್'ಳ ಧ್ವನಿ ನನಗೆ ಇಷ್ಟವಾಗಲಿಲ್ಲ' ಎಂದಿದ್ದಾರೆ.
ಈ ವಿಚಾರವಾಗಿ ಮಾತನಾಡಿದ 50 ವರ್ಷದ ನೀಲ್ 'ಶಬ್ಧ ಕೇಳಿ ನನಗೆ ತುಂಬಾ ಖುಷಿಯಾಗುತ್ತಿದೆ, ಇದಕ್ಕೂ ಹೆಚ್ಚಾಗಿ ದಾರಿಯಲ್ಲಿ ವೇಗವಾಗಿ ವಾಹನಗಳು ಸಾಗಿ ಬಂದಾಗ ಶಬ್ಧ ಕೇಳಿ ದುರ್ಘಟನೆಯನ್ನು ತಡೆಯಬಹುದು ಎಂದು ಖುಷಿಯಾಗುತ್ತಿದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.