
ನವದೆಹಲಿ(ಆ.06): ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ತಮ್ಮ ಬಲಿಷ್ಠ ಹೊಡೆತದ ಮೂಲಕ ಚೀನಾದ ಜುಲ್ಫಿಕರ್ ಮೈ ಮೈ ತೈಲಿಯನ್ನು ಪರಾಭವಗೊಳಿಸಿ ಚೀನಾಕ್ಕೆ ಮಣ್ಣು ಮುಕ್ಕಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಸಿಂಗ್, ಈ ಪಂದ್ಯದ ಮೂಲಕ ಚೀನಾಗೆ ಸಂದೇಶ ನೀಡುತ್ತಿದ್ದು, ನಮ್ಮ ಗಡಿ ಸುದ್ದಿಗೆ ಬರಬೇಡಿ ನಾವು ಶಾಂತಿ ಪ್ರಿಯರು' ಎಂದಿದ್ದಾರೆ.
ನಾನು ಜುಲ್ಫಿಕರ್ ಮೈಮೈತೈಲಿಯವರ ಈ ಬೆಲ್ಟ್‌ನ್ನು ಅವರಿಗೇ ಹಿಂತಿರುಗಿಸುತ್ತೇನೆ, ಆದರೆ ಮುಂದೆಂದೂ ಚೀನಾ ನಮ್ಮ ಗಡಿ ವಿಚಾರಕ್ಕೆ ಬರಬಾರದು, ಈ ಮೂಲಕ ನಾನು ಶಾಂತಿಯನ್ನು ಚೀನಾದಿಂದ ಬಯಸುತ್ತಿದ್ದೇನೆ' ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ. ಅಲ್ಲದೇ ಈ ಕುರಿತು ಟ್ವೀಟ್ ಸಹ ಮಾಡಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಹಲವಾರು ಭಿನ್ನಾಭಿಪ್ರಾಯಗಳು ಹಾಗೂ ಗಡಿ ವಿವಾದಗಳು ಹದಗೆಟ್ಟಿರುವುದರಿಂದ ನಿನ್ನೆ ನಡೆದ ಈ ಪಂದ್ಯ ಅಂತಿಮ ಘಟ್ಟದವರೆಗೂ ಕುತೂಹಲ ಕೆರಳಿಸಿತ್ತು. ಚೀನಾ ಸ್ಪರ್ಧಿಯ ಏಟಿಗೆ ಎದಿರೇಟು ನೀಡಿದ ವಿಜೇಂದರ್ ಸಿಂಗ್ ಕೊನೇ ಹತ್ತು ಸುತ್ತುಗಳವರೆಗೆ ನಡೆದ ರೋಚಕ ಬಾಕ್ಸಿಂಗ್ ಫೈಟ್‌ನಲ್ಲಿ ಅಂತಿಮವಾಗಿ 96-93, 95-94, 95-94 ಅಂತರದ ಮೂಲಕ ಡಬ್ಬಲ್ ಬೆಲ್ಟ್ ಗೆದ್ದರು. ಪಂದ್ಯದುದ್ದಕ್ಕೂ ಚೀನಾ ಬಾಕ್ಸರ್‌ಗೆ ದಿಟ್ಟ ಪ್ರತಿರೋಧ ನೀಡಿದ ವಿಜೇಂದರ್ ಸರ್ವಾನುಮತದ ಗೆಲುವು ಸಾಧಿಸಿದರು. ಈ ಮೂಲಕ ವಿಜೇಂದರ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ 9ನೇ ಗೆಲುವಿನೊಂದಿಗೆ ವಿಜಯಯಾತ್ರೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.