
ಉಡುಪಿ(ಆ.06): ಆಳ ಸಮುದ್ರ ಮೀನುಗಾರಿಕೆಗೆ ಇದ್ದ ಮಳೆಗಾಲದ ನಿಷೇಧ ಮುಗಿದಿದೆ. ಕರ್ನಾಟಕದ ಕರಾವಳಿಯ ಲಕ್ಷಾಂತರ ಮೀನುಗಾರರು ಮೀನಿನ ಬೇಟೆಗೆ ಸಜ್ಜಾಗುತ್ತಿದ್ದಾರೆ. ಆದರೆ ಜಿಎಸ್ ಟಿ ಎಫೆಕ್ಟ್'ನಿಂದ ಮೀನು ಸಂಗ್ರಹಕ್ಕೆ ಬಳಸುವ ಮಂಜುಗಡ್ಡೆ ದುಬಾರಿಯಾಗಿದ್ದು, ಮೀನುಗಾರರು ಕಂಗಾಲಾಗಿದ್ದಾರೆ.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದರೆ ವಾಪಸ್ ಹಿಂತಿರುಗುವುದು 2-3 ದಿನವಾಗುತ್ತದೆ. ಮೀನುಗಳು ಕೆಡದಂತೆ ಸಂರಕ್ಷಿಸಲು ಮಂಜುಗಡ್ಡೆ ಬೇಕೇ ಬೇಕು.. ಆದ್ರೆ ಜಿಎಸ್‌ಟಿ ಜಾರಿಯಾದ ಬಳಿಕ ಕರಾವಳಿಯಲ್ಲಿರುವ ಮಂಜುಗಡ್ಡೆ ಸ್ಥಾವರಗಳು ಸಂಕಷ್ಟಕ್ಕೆ ಸಿಲುಕಿವೆ. ಈಗಾಗಲೇ ವಿದ್ಯುತ್ ದರ ಹೆಚ್ಚಳಿಂದ ನಷ್ಟಕ್ಕೆ ಸಿಲುಕಿದ್ದರು. ಇಷ್ಟು ದಿನ ಕಚ್ಚಾವಸ್ತುಗಳ ಮೇಲೆ ಶೇ.2ರಷ್ಟು ತೆರಿಗೆ ಜಿಎಸ್‌ಟಿ ಜಾರಿಯಾದ ಮೇಲೆ ಶೇ. 18ಕ್ಕೆ ಏರಿದೆ. ಇದಲ್ಲದೆ ಮಂಜುಗಡ್ಡೆ ಸ್ಥಾವರಕ್ಕಿದ್ದ ವ್ಯಾಟ್ ವಿನಾಯಿತಿ ಕೂಡ ಜೂನ್ 31ರಿಂದ ರದ್ದಾಗಿದೆ.. ಇದರಿಂದಾಗಿ 10ಕ್ಕೂ ಹೆಚ್ಚು ಮಂಜುಗಡ್ಡೆ ಸ್ಥಾವರಗಳನ್ನ ಮುಚ್ಚಲಾಗಿದ್ದು, ಇನ್ನೂ ಕೆಲವು ಬೀಗ ಜಡಿಯುವ ಹಂತದಲ್ಲಿವೆಯಂತೆ.
ಇನ್ನೂ ಮಂಜುಗಡ್ಡೆ ದರ ಹೆಚ್ಚಳ ಮೀನುಗಾರರಿಗೆ ಹೊರೆಯಾಗಿ ಪರಿಣಮಿಸಿದೆ. ಮೊದಲೇ ನಷ್ಟದಲ್ಲಿರುವ ಮೀನುಗಾರಿಗೆ ಮಂಜುಗಡ್ಡೆ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಕೇರಳ ಮತ್ತು ಗೇವಾದಲ್ಲಿ ಮಂಜುಗಡ್ಡೆಗೆ ಕಡಿಮೆ ದರ ಇರುವ ಕಾರಣ ಅಲ್ಲಿಂದ ಮಂಜುಗಡ್ಡೆಯನ್ನು ತರಿಸಲಾಗುತ್ತಿದೆ.
ಒಟ್ಟಾರೆ ಸಮುದ್ರ ಪೂಜೆ ಪೂರೈಸಿಕೊಂಡು ನಾಳೆಯಿಂದ ಆಳ ಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳಲಿವೆ. ನೆರೆಯ ರಾಜ್ಯಗಳಂತೆ ನಮ್ಮ ಕರಾವಳಿಯ ಮಂಜುಗಡ್ಡೆ ಸ್ಥಾವರಗಳಿಗೂ ಸಹಾಯ ಹಸ್ತ ಚಾಚಿ ಅನ್ನೋದು ಇವರ ಬೇಡಿಕೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.