ಹಿರಿಯ ನಟ 'ವಿಜಯ್' ಮೃತಪಟ್ಟರಂತೆ? ಅಸಲಿಗೆ ಏನಿದು ಅಂತೀರಾ ?

Published : May 11, 2017, 12:01 PM ISTUpdated : Apr 11, 2018, 12:53 PM IST
ಹಿರಿಯ ನಟ 'ವಿಜಯ್' ಮೃತಪಟ್ಟರಂತೆ? ಅಸಲಿಗೆ ಏನಿದು ಅಂತೀರಾ ?

ಸಾರಾಂಶ

ಮಲಯಾಳಂ'ನ ಹಿರಿಯ ನಟರಾದ ವಿಜಯ್ ರಾಘವನ್  ಬೆಂಗಳೂರು ಡೇಸ್' ರಾವಣ ಪ್ರಭು, ಲೀಲಾ ಸೇರಿದಂತೆ ಹಲವು ಸಿನಿಮಾ'ಗಳಲ್ಲಿ ಅಭಿನಯಿಸಿದ್ದಾರೆ.

ತಿರುವನಂತಪುರಂ(ಮೇ.11): ಹಿರಿಯ ಮಲಯಾಳಂ ನಟ ವಿಜಯ್ ಎಂದೇ ಖ್ಯಾತಿ ಪಡೆದಿರುವ ವಿಜಯರಾಘವನ್ ಮೃತಪಟ್ಟರೆಂಬ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್'ಅಪ್, ಫೇಸ್'ಬುಕ್'ನಾದ್ಯಂತ ಹರಿದಾಡುತ್ತಿದೆ.

ಮೃತದೇಹ ಸಾಗಿಸುವ ಆಂಬ್ಯಲೆನ್ಸ್'ನಲ್ಲಿ ಮುಂಭಾಗ ವಿಜಯ್ ರಾಘವನ್ ಅವರ ಭಾವಚಿತ್ರಕ್ಕೆ ಹೂವಿನ ಹಾರವನ್ನು ಹೊದಿಸಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಬುಧವಾರದಿಂದ  ಹರಿದಾಡುತ್ತಿದೆ. ಸ್ವತಃ ಅವರು ಮೃತಪಟ್ಟಿರುವ ವಿಷಯವನ್ನು ಅವರ ಪುತ್ರ'ನಿಂದ ತಿಳಿದುಕೊಂಡರಂತೆ.' ಯಾರೋ ಕಿಡಿಗೇಡಿಗಳು ಈ ಸುಳ್ಳು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದು, ಯಾರು ಇದನ್ನು ನಂಬಬಾರದೆಂದು ಅಭಿಮಾನಿಗಳು ಹಾಗೂ ಸಂಬಂಧಿಕರಿಗೆ ಮನವಿ ಮಾಡಿದ್ದಾರೆ.

ನಾನು ಬದುಕಿರುವ ಸುದ್ದಿಯನ್ನು ಎಲ್ಲರಿಗೂ ಖಚಿತಪಡಿಸುವುದರಲ್ಲೇ ಫೋನ್ ಹಾಗೂ ಸಂದೇಶ ಕಳುಹಿಸುವುದರಲ್ಲಿ ನಾನು ಬ್ಯಸಿಯಾಗಿದ್ದೇನೆ. ಅಸಲಿಗೆ ಆ ಚಿತ್ರ ನಟ ದಿಲೀಪ್ ಅಭಿನಯದ ಮಲಯಾಳಂ' ಸಿನಿಮಾದ್ದಾಗಿದೆ. ಈ ಸುಳ್ಳು ಸುದ್ದಿಗೆ ಸಂಬಂಧಿಸಿದಂತೆ ನಾನು ಪೊಲೀಸರಿಗೆ ದೂರು ನೀಡಲು ಹೋಗುವುದಿಲ್ಲ. ಇದು ಕಪೋಕಲ್ಪಿತ ಎಂದು ಮರೆತು ಬಿಡುತ್ತೇನೆ. ಆದಾಗ್ಯೂ ಕೇರಳ ಪೊಲೀಸ್ ಡಿಜಿಪಿಯಾದ ಟಿಪಿ ಸೇನ್ ಕುಮಾರ್ ಸುಳ್ಳು ಸುದ್ದಿ ಹರಿಯ ಬಿಟ್ಟಿರುವವರ ವಿರುದ್ಧ ತನಿಖೆಗೆ ಆದೇಶಿಸುವುದಾಗಿ ತಿಳಿಸಿದ್ದಾರೆ.

ಮಲಯಾಳಂ'ನ ಹಿರಿಯ ನಟರಾದ ವಿಜಯ್ ರಾಘವನ್  ಬೆಂಗಳೂರು ಡೇಸ್' ರಾವಣ ಪ್ರಭು, ಲೀಲಾ ಸೇರಿದಂತೆ ಹಲವು ಸಿನಿಮಾ'ಗಳಲ್ಲಿ ಅಭಿನಯಿಸಿದ್ದಾರೆ.

ಮೂಲ: newsable asianetnews

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌