ವಿಜಯಪುರದಲ್ಲಿ ಕಾಲೇಜು ಕಟ್ಟಡ ಕುಸಿತ

By Suvarna Web DeskFirst Published Aug 10, 2017, 11:06 AM IST
Highlights

ಕಟ್ಟಡಗಳಲ್ಲಿ ಯಾವೊಬ್ಬ ವ್ಯಕ್ತಿಯೂ ಇಲ್ಲದಿದ್ದರಿಂದ ಅದೃಷ್ಟಕ್ಕೆ ಯಾವುದೇ ಜೀವಹಾನಿಯಾಗಿಲ್ಲ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ದಿನನಿತ್ಯ ತರಗತಿಗಳು ನಡೆಯುತ್ತವೆ. ಅಕಸ್ಮತ್, ತರಗತಿ ನಡೆಯುವ ವೇಳೆ ದುರ್ಘಟನೆ ನಡೆದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತೆನ್ನಲಾಗಿದೆ.

ವಿಜಯಪುರ(ಆ. 10): ಮೂರು ಅಂತಸ್ತಿನ ಮೂರು ಕಟ್ಟಡಗಳು ನಸುಕಿನ ಜಾವ ಏಕಾಏಕಿ ಕುಸಿದ ದುರ್ಘಟನೆ ವಿಜಯಪುರದ ಗಂಗಾಪುರಂ ಬಡಾವಣೆಯಲ್ಲಿ ಸಂಭವಿಸಿದೆ. ರೇಶ್ಮಿ ಪ್ಯಾರಾ ಮೆಡಿಕಲ್ ಕಾಲೇಜಿಗೆ ಸೇರಿದ ಕಟ್ಟಡಗಳು ಏಕಾಏಕಿ ಕುಸಿದಿವೆ. ಆದರೆ, ಕಟ್ಟಡಗಳಲ್ಲಿ ಯಾವೊಬ್ಬ ವ್ಯಕ್ತಿಯೂ ಇಲ್ಲದಿದ್ದರಿಂದ ಅದೃಷ್ಟಕ್ಕೆ ಯಾವುದೇ ಜೀವಹಾನಿಯಾಗಿಲ್ಲ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ದಿನನಿತ್ಯ ತರಗತಿಗಳು ನಡೆಯುತ್ತವೆ. ಅಕಸ್ಮತ್, ತರಗತಿ ನಡೆಯುವ ವೇಳೆ ದುರ್ಘಟನೆ ನಡೆದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತೆನ್ನಲಾಗಿದೆ.

click me!