ಗುಜರಾತಿನಲ್ಲಿ ಅತೀ ಹೆಚ್ಚು ಕಳ್ಳನೋಟುಗಳು ಪತ್ತೆ!

By Suvarna Web DeskFirst Published Aug 10, 2017, 10:54 AM IST
Highlights

ನೋಟು ಅಮಾನ್ಯ ಕ್ರಮದ ಬಳಿಕ ಸುಮಾರು 2.55 ಕೋಟಿ ಮೌಲ್ಯದ ಕಳ್ಳನೋಟುಗಳನ್ನು ಗಡಿ ಪ್ರದೇಶಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ತಿಳಿಸಿದೆ.  ಈ ಪೈಕಿ ಅತೀ ಹೆಚ್ಚು ಕಳ್ಳನೋಟುಗಳನ್ನು ಗುಜರಾತಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಹೇಳಿದೆ. ಸುಮಾರು 1.37 ಕೋಟಿ ಮೌಲ್ಯದ ಕಳ್ಳನೋಟುಗಳು ಗುಜರಾತಿನಲ್ಲಿ ಪತ್ತೆಯಾಗಿದ್ದರೆ, ರೂ. 55 ಲಕ್ಷ ಮಿಝೊರಾಮ್’ನಲ್ಲಿ, ರೂ.44 ಲಕ್ಷ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿವೆ. ಪಂಜಾಬಿನಲ್ಲಿ ರೂ. 5.60 ಲಕ್ಷ ಮೌಲ್ಯದ ಕಳ್ಳ ನೋಟುಗಳು ಪತ್ತೆಯಾಗಿವೆ.

ನವದೆಹಲಿ: ನೋಟು ಅಮಾನ್ಯ ಕ್ರಮದ ಬಳಿಕ ಸುಮಾರು 2.55 ಕೋಟಿ ಮೌಲ್ಯದ ಕಳ್ಳನೋಟುಗಳನ್ನು ಗಡಿ ಪ್ರದೇಶಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ತಿಳಿಸಿದೆ.

ಈ ಪೈಕಿ ಅತೀ ಹೆಚ್ಚು ಕಳ್ಳನೋಟುಗಳನ್ನು ಗುಜರಾತಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಹೇಳಿದೆ. ಸುಮಾರು 1.37 ಕೋಟಿ ಮೌಲ್ಯದ ಕಳ್ಳನೋಟುಗಳು ಗುಜರಾತಿನಲ್ಲಿ ಪತ್ತೆಯಾಗಿದ್ದರೆ, ರೂ. 55 ಲಕ್ಷ ಮಿಝೊರಾಮ್’ನಲ್ಲಿ, ರೂ.44 ಲಕ್ಷ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿವೆ. ಪಂಜಾಬಿನಲ್ಲಿ ರೂ. 5.60 ಲಕ್ಷ ಮೌಲ್ಯದ ಕಳ್ಳ ನೋಟುಗಳು ಪತ್ತೆಯಾಗಿವೆ.

ಒಟ್ಟು 23, 429 ಕಳ್ಳನೋಟುಗಳು ಪತ್ತೆಯಾಗಿದ್ದು, ಅವುಗಳಲ್ಲಿ ಅಮಾನ್ಯಗೊಂಡ ರೂ.500 ಹಾಗೂ ರೂ.1000 ನೋಟುಗಳು ಸೇರಿವೆ.

ದೇಶದೊಳಗೆ ಖೋಟಾನೋಟುಗಳ ಕಳ್ಳಸಾಗಾಣಿಕೆಯನ್ನು ತಡೆಯಲು ಕೇಂದ್ರವು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಹಾಗೂ ಗಡಿಗಳಲ್ಲಿ ಆಧುನಿಕ ತಂತ್ರಾಜ್ಞಾನಾಧಾರಿತ ನಿಗಾ ವ್ಯವಸ್ಥೆಯನ್ನು ಅಳವಡಿಸುತ್ತಿದೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಹಂಸರಾಜ್ ಆಹಿರ್ ತಿಳಿಸಿದ್ದಾರೆ.

ಜತೆಗೆ ಗಡಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ, ಗಡಿ-ಬೇಲಿ ನಿರ್ಮಾಣ ಹಾಗೂ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)

click me!