
ಬೆಳಗಾವಿ(ಆ. 10): ರಾಜಸ್ಥಾನದ ಮಿಲಿಟರಿ ನೆಲೆಯ 422ನೇ ಎಂಜಿನಿಯರ್ ಇಂಡಿಪೆಂಡೆಂಟ್ ಸ್ಕ್ವಾಡ್'ನ ಆರ್ಮರ್ ಟ್ಯಾಂಕ್ ಅಪಘಾತದಲ್ಲಿ ಮೃತಪಟ್ಟ ಕನ್ನಡಿಗ ಯೋಧನ ಪಾರ್ಥಿವ ಶರೀರವನ್ನು ತವರಿಗೆ ತರಲಾಗಿದೆ. ಚಿಕ್ಕೋಡಿ ತಾಲೂಕು ಕರೋಶಿ ಗ್ರಾಮದರಾದ ಧೀರ ಯೋಧ ಬಸವರಾಜ ಗುರುಸಿದ್ದ ಉಪಾಸೆ ಆ. 7ರಂದು ರಾಜಸ್ಥಾನದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಇಂದು ಗುರುವಾರ ಬೆಳಗ್ಗೆ 6 ಗಂಟೆಗೆ ಕರೋಶಿ ಗ್ರಾಮಕ್ಕೆ ತರಲಾಯ್ತು.. ಗ್ರಾಮದ ಸಿಎಸ್'ಎಸ್ ಪ್ರೌಢಶಾಲೆ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಗ್ರಾಮಸ್ಥರು, ಶಾಲಾ ಮಕ್ಕಳು ಸೇರಿದಂತೆ ಅಂತಿಮ ದರ್ಶನ ಪಡೆದರು. ರಾಯಭಾಗ ಶಾಸಕ ದುರ್ಯೊಧನ ಐಹೊಳೆ ಅವರು ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.